ಯಂಕಣ್ಣ ಸಾಗರ್ ಬೆಂಗಳೂರು
ಲೋನ್ ಆಪ್ಗಳ ಮೂಲಕ ಸಾಲ ಪಡೆಯುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ! ಏಕೆಂದರೆ ಸಾಲ ಕೊಟ್ಟ ಬಳಿಕ ನಿಮ್ಮ ಮೊಬೈಲ್ನಲ್ಲಿರುವ ವೈಯಕ್ತಿಕ ವಿವರಗಳ ಕದ್ದು, ನಿಮ್ಮನ್ನೇ ಬ್ಲ್ಯಾಕ್ಮೇಲ್ ಮಾಡುವ ದಂಧೆ ಶುರುವಾಗಿದೆ!
ಕರೊನಾ ಲಾಕ್ಡೌನ್ ಬಳಿಕ ನೂರಾರು ಅನಧಿಕೃತ ಲೋನ್ ಆಪ್ಗಳು ಹುಟ್ಟಿಕೊಂಡಿದ್ದು, ಅಂಥಹ ಆಪ್ಗಳನ್ನು ಇನ್ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್ ಫೋನ್ನಲ್ಲಿರುವ ಸಂಪೂರ್ಣ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಕದ್ದ ಡೇಟಾದಿಂದ ಬ್ಲ್ಯಾಕ್ಮೇಲ್ ಮಾಡುತ್ತಾರೆ ಎಂದು ಸಿಐಡಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ.
ಸೈಬರ್ ಪೊಲೀಸರ ಸಲಹೆ?: * ಗೂಗಲ್, ಜಾಲತಾಣಗಳಿಂದ ಆಪ್ ಡೌನ್ಲೋಡ್ ಮಾಡುವುದು ಬೇಡ. * ಜಾಲತಾಣಗಳಲ್ಲಿ ಸಿಗುವ ಆಪ್ಗಳು ಅನಧಿಕೃತ. * ಆಪ್ ಇನ್ಸ್ಟಾಲ್ ಮಾಡುವ ಮುನ್ನ ಸುರಕ್ಷತೆಯನ್ನು ಪರೀಕ್ಷಿಸಿಕೊಳ್ಳಬೇಕು. * ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರ, ಕಾರ್ಡ್ ನಂಬರ್, ಸಿವಿವಿ ಮತ್ತು ಓಟಿಪಿ ನಂಬರ್ ಹಂಚಿಕೊಳ್ಳಬೇಡಿ. * ಅನಧಿಕೃತ ಆಪ್ ಆಗಿದ್ದರೆ ಮೊಬೈಲ್ನಲ್ಲಿನ ಮಾಹಿತಿ ಸೋರಿಕೆ ಸಾಧ್ಯತೆ. * ಲೋನ್ ಆಪ್ ಕಂಪನಿಗೆ ಆರ್ಬಿಐನಿಂದ ಮಾನ್ಯತೆ ಸಿಕ್ಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. * ಬ್ಯಾಂಕ್ ಅಥವಾ ಫೈನಾನ್ಸ್ ಸರ್ವೀಸ್ ಕಂಪನಿ
ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ‘ಲೋನ್ ಇನ್ ಒನ್ ಮಿನಿಟ್’ (ಒಂದು ನಿಮಿಷದಲ್ಲಿ ಸಾಲ) ಎಂಬ ಲಿಂಕ್ಗಳು ಜನರನ್ನು ಸೆಳೆಯುತ್ತಿವೆ. ಇಂಥಹ ಆಪ್ಗಳನ್ನು ಇನ್ಸ್ಟಾಲ್ ಮಾಡಿ, ಸಾಲ ಕೋರಿದರೆ ಬ್ಯಾಂಕ್ ಸೇರಿ ಇನ್ನಿತರ ಕೆಲ ದಾಖಲೆಗಳನ್ನು ಪಡೆದುಕೊಂಡು ಸಾಲ ನೀಡಲಾಗುತ್ತದೆ. ಆದರೆ ಆರ್ಬಿಐನಿಂದ ಮಾನ್ಯತೆ ಪಡೆಯದ ಈ ಆಪ್ಗಳು ದಂಧೆ ನಡೆಸುತ್ತಿದ್ದು, ಮರುಪಾವತಿ ವಿಳಂಬವಾದರೆ ನಕಲಿ ಲೀಗಲ್ ನೋಟಿಸ್ ಕಳುಹಿಸಿ ಬೆದರಿಸುತ್ತಾರೆ.
ಲೋನ್ ಆಪ್ ಇನ್ಸ್ಟಾಲ್ ಮಾಡುವ ಮುನ್ನ ಸುರಕ್ಷತೆ ಹಾಗೂ ಪರ್ವಿುಷನ್ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಅನಧಿಕೃತ ಆಪ್ ಆಗಿದ್ದರೆ, ಮೊಬೈಲ್ ಬಳಕೆದಾರನ ಜಿಪಿಎಸ್ ಲೊಕೇಷನ್, ಮೊಬೈಲ್ ಗ್ಯಾಲರಿ, ಫೋನ್ ನಂಬರ್ ಸೇರಿ ಇನ್ನಿತರ ವೈಯಕ್ತಿಕ ಮಾಹಿತಿ ಸುಲಭವಾಗಿ ಲೋನ್ ಆಪ್ ಕಂಪನಿಯವರ ಕೈ ಸೇರಲಿದೆ. ಸಾಲ ಮರುಪಾವತಿಸದಿದ್ದಾಗ ಮೊಬೈಲ್ನಿಂದ ಫೋಟೋ ಹಾಗೂ ವಿಡಿಯೋಗಳನ್ನು ಕದ್ದು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುವುದಾಗಿ ಬ್ಲಾ್ಯಕ್ವೆುೕಲ್ ಮಾಡುತ್ತಾರೆ. ಖಾಸಗಿ ಮಾಹಿತಿ ಇದ್ದರೆ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಂದನಾತ್ಮಕ ಫೋಟೋ ರವಾನೆ
ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಕೆಲ ತಿಂಗಳ ಹಿಂದೆ ಬೇರೆಬೇರೆ ಲೋನ್ ಆಪ್ಗಳಿಂದ ಸಾಲ ಪಡೆದಿದ್ದರು. ನಿಗದಿತ ಅವಧಿಗೆ ಸಾಲ ಮರುಪಾವತಿಸಲು ಆಗಿಲ್ಲ. ಇತ್ತೀಚೆಗೆ ಲೋನ್ ಆಪ್ ಕಂಪನಿಯ ನೌಕರ, ಸಾಲ ಪಡೆದ ವ್ಯಕ್ತಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ. ಬಳಿಕ ಆತನ ಫೋಟೋಗಳ ಮೇಲೆ ‘ಫ್ರಾಡ್’ ಎಂದು ಬರೆದು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಈ ಕುರಿತು ಸಾಲ ಪಡೆದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಧಿಕ ಬಡ್ಡಿ ಹಾಕುತ್ತಿರುವ ಆಪ್ ಕಂಪನಿ ಹಾಗೂ ನಿಂದಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರು ನೀಡಿದ್ದಾರೆ.
ಹೀಗೂ ವಂಚಿಸುತ್ತಾರೆ?: ಜಯನಗರದ ನಿವಾಸಿಯೊಬ್ಬರು ನ.6ರಂದು ‘ಉಧಾರ್’ ಆಪ್ನಲ್ಲಿ 3,500 ರೂ. ಲೋನ್ ಪಡೆದಿದ್ದರು. ನ. 13ರಂದು ಮರುಪಾವತಿಸಿದ್ದರು. ಅದೇ ದಿನ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಉಧಾರ್ ಲೋನ್ ಎಕ್ಸಿಕ್ಯೂಟಿವ್ ಎಂದಿದ್ದ. ಲೋನ್ ಮರುಪಾವತಿಯಾಗಿಲ್ಲ. ನಿಮ್ಮ ಮೊಬೈಲ್ಗೆ ಓಟಿಪಿ ನಂಬರ್ ಬರುತ್ತದೆ ಅದನ್ನು ತಿಳಿಸುವಂತೆ ಹೇಳಿದ್ದ. ಆತನ ಮಾತನ್ನು ನಂಬಿದ ಚೇತನ್ ಕುಮಾರ್ ಒಟಿಪಿ ನಂಬರ್ ಹಂಚಿಕೊಂಡಿದ್ದರು. ಇದಾದ ಬಳಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿರುವ ಅಪರಿಚಿತ, ವಿವಿಧ ಲೋನ್ ಆಪ್ಗಳಿಂದ 32 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಇತ್ತೀಚೆಗೆ ಚೇತನ್ ಅವರಿಗೆ ಅನಾಮಿಕ ನಂಬರ್ಗಳಿಂದ ಕರೆ ಮಾಡಿ, ಲೋನ್ ಕಟ್ಟುವಂತೆ ನಿಂದಿಸಿದ್ದಾರೆ. ವಂಚಿಸಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..