ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11 (BBKS11) ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳಿಗೂ ಹೆಚ್ಚು ದಿನಗಳೇ ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಜಗ್ಗಾಟ ಜೋರಾಗಿದೆ. ಕಳೆದ ವಾರ ನಟ, ನಿರೂಪಕ ಸುದೀಪ್ ಅವರ ಉಪಸ್ಥಿತಿಯಲ್ಲಿ ಬಿಗ್ ಬಾಸ್ ವಾರಾಂತ್ಯ ಸಾಗಿತ್ತು. ಐದನೇ ವಾರಕ್ಕೆ ವೇದಿಕೆಗೆ ಹಾಜರಾದ ಕಿಚ್ಚ ಸುದೀಪ್, ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ನಡೆಸಿಕೊಟ್ಟು, ಮನೆಯಿಂದ ಮಾನಸಾ ಅವರನ್ನು ಎಲಿಮಿನೇಟ್ ಆದ ಕಾರಣ ಹೊರಬರುವಂತೆ ಹೇಳಿದರು.
ಇದನ್ನೂ ಓದಿ: ಶೌಚಗೃಹ ನಿರ್ಮಾಣ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ
ಇನ್ನು 6ನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳ ನಡುವೆ ಮಾತಿಗಿಂತ ದೈಹಿಕ ಬಲಾಬಲವೇ ಹೆಚ್ಚು ಸದ್ದು ಮಾಡಲಾರಂಭಿಸಿದ್ದು, ಸದಸ್ಯರ ನಡುವಿನ ಜಗ್ಗಾಟ ಜೋರಾಗಿದೆ. ಅದರಲ್ಲೂ ಈ ವಾರದ ಟಾಸ್ಕ್ಗಳಲ್ಲಿ ಪ್ರತಿಯೊಬ್ಬರು ತಮ್ಮ ಬುದ್ಧಿವಂತಿಕೆ ಮತ್ತು ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಉತ್ತಮ ಹಾಗೂ ಕ್ಯಾಪ್ಟನ್ ಪಟ್ಟ ಪಡೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಈ ಪೈಕಿ ಬಿಗ್ ಬಾಸ್ ಯಾರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ, ಮನೆಯವರು ಕೊಟ್ಟ ಹೆಸರು ಮತ್ತು ಕಾರಣಗಳು ಕೆಲ ಸ್ಪರ್ಧಿಗಳಿಗೆ ಕಿಂಚಿತ್ತು ಹಿಡಿಸಿಲ್ಲ.
ಗೌತಮಿ ಜಾದವ್ ಮತ್ತು ಮಂಜು ನಡುವೆ ವಾಕ್ಸಮರ ಜೋರಾದರೆ. ಅತ್ತ ಧನರಾಜ್ ಮತ್ತು ಮೋಕ್ಷಿತಾ ಮಧ್ಯೆಯೂ ಮಾತಿನ ಚಕಮಕಿ ತಾರಕಕ್ಕೇರಿದೆ. ಅನುಷಾ ರೈ ಮತ್ತು ಮೋಕ್ಷಿತಾ ಹೆಸರು ಪರಿಗಣಿಸಿದ್ದಕ್ಕೆ ಇಬ್ಬರಿಂದಲೂ ಭಾರೀ ಅಸಮಾಧಾನ ಕೇಳಿಬಂದಿದೆ. ಈ ವಿಚಾರಕ್ಕೆ ಕಿವಿಗೊಡದ ಧನರಾಜ್, ಇಲ್ಲಿ ನಾನು ಯಾರಿಗೂ ಹೆದರುವುದಿಲ್ಲ. ಹಳೆಯ ಧನು ಈಗಿಲ್ಲ ಎಂದು ಗಟ್ಟಿಯಾಗಿ ಧ್ವನಿ ಏರಿಸಿ ಮಾತನಾಡಿದ್ದಾರೆ. ಅಸಲಿಗೆ ಜಗಳ ಸ್ಫೋಟಗೊಳ್ಳಲು ಇವರು ಕೊಟ್ಟ ಕಾರಣವೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.