ನ್ಯೂಸ್

BBKS11: ತ್ರಿವಿಕ್ರಮ್​​-ಮೋಕ್ಷಿತಾ ನಡುವೆ ಪ್ರೀತಿ ಶುರುವಾಗಿದ್ಯಾ? ಅನುಷಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು: ಕಳೆದ ಭಾನುವಾರ (ನ.17) ಏಳನೇ ವಾರಕ್ಕೆ ಬಿಗ್ ಮನೆಯಿಂದ ಚಿತ್ರನಟಿ ಅನುಷಾ ರೈ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮನೆಯೊಳಗೆ ಇಬ್ಬರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದಂತೆ ಅನುಷಾ ಎಕ್ಸಿಟ್​ ಆದರು. ತಮ್ಮ ಎಲಿಮಿನೇಷನ್ ಹಾಗೂ ಬಿಗ್ ಬಾಸ್​ ಪಯಣ ಕುರಿತು ಒಂದಷ್ಟು ವಿಚಾರಗಳನ್ನು 'ವಿಜಯವಾಣಿ' ತಂಡದೊಂದಿಗೆ ನಟಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ ಪಯಣದಲ್ಲಿ ತಾವು ಕಂಡ ಅನುಭವಗಳನ್ನು ಮನಬಿಚ್ಚಿ ಮಾತನಾಡಿದ ಅನುಷಾಗೆ, ಮನೆಯೊಳಗೆ ಪರಸ್ಪರ ಕಿತ್ತಾಡಿಕೊಂಡಿದ್ದ ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವೆ ಪ್ರೀತಿ ಚಿಗುರಿದೆಯೇ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, "ಮೋಕ್ಷಿತಾ ಬಹಳ ಮೌನಿಯಾಗಿರುವ ವ್ಯಕ್ತಿ. ತ್ರಿವಿಕ್ರಿಮ್ ಕೂಡ ಅಷ್ಟೇ ಒಳ್ಳೆಯವರು. ಆಕೆ ಎಲ್ಲರ ಜತೆ ನಗುನಗುತ ಮಾತನಾಡುತ್ತಾರೆ" ಎಂದರು.

"ಅವರಿಬ್ಬರ ಮಧ್ಯೆ ಮನಸ್ತಾಪ ಮೂಡಲು ಮಂಜಣ್ಣ, ವಿಕ್ಕಿ ವಿರುದ್ಧ ಯಾವುದೋ ಒಂದು ಮಾತು ಹೇಳಿರುತ್ತಾರೆ. ಆ ವಿಚಾರಕ್ಕೆ ಮೋಕ್ಷಿತಾ ಪ್ರತಿಕ್ರಿಯಿಸಿ, ನೀವು ಗೋಮುಖವ್ಯಾಘ್ರ ಎಂದು ಹೇಳ್ತಾರೆ. ಆ ಪದವನ್ನು ಒಪ್ಪಿಕೊಳ್ಳಲು ಆಗ್ತಿಲ್ಲ ಎಂದು ಹೇಳಿಕೊಂಡ ತ್ರಿವಿಕ್ರಮ್, ಮನಸ್ಸಿಗೆ ಘಾಸಿ ಮಾಡಿಕೊಂಡಿದ್ದರು. ಈ ವಿವಾದವನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ವಿಕ್ಕಿ...." ಮುಂದುವರಿದ ಸಂಭಾಷಣೆ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಲಿಂಕ್ ವೀಕ್ಷಿಸಿ.