ನ್ಯೂಸ್

BBKS11: ನಿನ್ನ ರೀತಿ ಹೆದರಿಲ್ಲ ನಾನು... ಹೇಡಿತನಕ್ಕೆ 'ಧರ್ಮ' ಕಿಡಿ

ಮೋಹನ್​ ಶೆಟ್ಟಿ

ಬೆಂಗಳೂರು: ಕನ್ನಡ ಬಿಗ್​ಬಾಸ್ ಸೀಸನ್​ 11ರಲ್ಲಿ ಮಹಿಳೆಯರನ್ನು ನಿಂದಿಸಿದ ಲಾಯರ್​ ಜಗದೀಶ್​ ಮತ್ತು ದೈಹಿಕ ಹಲ್ಲೆ ನಡೆಸಿದ ಕಾರಣ ರಂಜೀತ್​ ಮನೆಯಿಂದ ಎಲಿಮಿನೇಟ್ ಆಗಿ ಹೊರನಡೆದರು. ಇವರಿಬ್ಬರು ಹೊರಬಿದ್ದ ಬೆನ್ನಲ್ಲೇ ವೀಕ್ಷಕರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಎಲ್ಲವೂ ಜಗಳ, ಪರಸ್ಪರ ವಾಗ್ದಾಳಿಯಲ್ಲಿ ಮುಳುಗಿ ಹೋಗಿದೆ ಎಂದು ಅಭಿಪ್ರಾಯಿಸಿದ್ದರು. ಸದ್ಯ ಸ್ಪರ್ಧಿಗಳ ನಡುವಿನ ಜಟಾಪಟಿ ತಾರಕಕ್ಕೇರಿದ ಸಮಯದಲ್ಲೇ ಮನೆಯೊಳಗೆ ಹಿರಿಯ ಪತ್ರಕರ್ತೆ, ನಿರೂಪಕಿ ರಾಧಾ ಹಿರೇಗೌಡರ್​ ಎಂಟ್ರಿ ಕೊಟ್ಟಿದ್ದಾರೆ.

ರಾಧಾ ಮನೆಗೆ ಪ್ರವೇಶಿಸಿದ ಬೆನ್ನಲ್ಲೇ ಅಚ್ಚರಿ ವ್ಯಕ್ತಪಡಿಸಿದ ಬಿಗ್ ಮಂದಿ, ಪ್ರಾರಂಭದಲ್ಲಿ ಅವರೊಡನೆ ಸೇರಿಕೊಂಡು ನಗು ಚೆಲ್ಲಿದ್ದೇ ಆದರೂ ನಂತರದಲ್ಲಿ ಅವರ ಖಡಕ್ ಮಾತಿಗೆ ಬೆದರಿದ್ದಾರೆ. ರಾಜಕೀಯ ಟಾಸ್ಕ್​ನಲ್ಲಿ ಮಗ್ನರಾಗಿದ್ದ ಸ್ಪರ್ಧಿಗಳಿಗೆ ತಮ್ಮ ಮಾತುಗಳಿಂದಲೇ ಚಳಿ ಬಿಡಿಸಿದ ರಾಧಾ, ನಮಗೆಲ್ಲ ಪಕ್ಷಗಳೆಲ್ಲ ಹೊಸದಲ್ಲ, ಭಾಷಣ ಹಾಗೂ ಜೈಕಾರ ಇದೆಲ್ಲ ಸಾಕಷ್ಟು ನೋಡಿದ್ದೀವಿ ಎಂದರು. ರಾಧಾ ಅವರು ಕೇಳಿದ ನೇರವಾದ ಪ್ರಶ್ನೆಗಳಿಗೆ ಸ್ಪರ್ಧಿಗಳು ಕಕ್ಕಾಬಿಕ್ಕಿಯಾದರೆ, ಅತ್ತ ಐಶ್ವರ್ಯಾ ಕಣ್ಣೀರಾಕಿದ್ದರು.

ತಮ್ಮ ಹರಿತವಾದ ಮಾತುಗಳಿಂದಲೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ರಾಧಾ, ಈ ಮನೆಯ ಹೇಡಿ ಯಾರು ಎಂಬ ಪ್ರಶ್ನೆಯನ್ನು ಧನರಾಜ್​ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಧನರಾಜ್, ನೇರವಾಗಿ ಧರ್ಮ ಹೆಸರು ಸೂಚಿಸಿದರು. ಈ ಮಾತು ಧರ್ಮ ಕಿವಿಗೆ ಬಿದ್ದದ್ದೇ ತಡ ಭಾರೀ ವಾದ-ವಿವಾದವೇ ನಡೆದುಹೋಗಿದೆ. ಅಷ್ಟಕ್ಕೂ ಧರ್ಮ ಮತ್ತು ಧನರಾಜ್ ನಡುವೆ ಆದ ಸಂಭಾಷಣೆ ಏನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.