ನ್ಯೂಸ್

BBKS11: ರಕ್ಷಣೆ ಹೆಸರಲ್ಲಿ ಬಲ ಪ್ರಯೋಗ! ಜಿದಾಜಿದ್ದಿಯಲ್ಲಿ ಕುಸಿದುಬಿದ್ದ ಹನುಮಂತು

ಬೆಂಗಳೂರು: ಕನ್ನಡದ ಬಿಗ್​ಬಾಸ್ ಸೀಸನ್ 11 (BBKS11) ಶುರುವಾಗಿ ಒಂದು ತಿಂಗಳು ಕಳೆಯುವ ಮುನ್ನವೇ 'ಬಿಗ್'​ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇಷ್ಟು ದಿನ ಇಲ್ಲಸಲ್ಲದ ವಿಚಾರಗಳಿಗೆ ಮನೆಯೊಳಗೆ ವಾದ-ಪ್ರತಿವಾದಗಳು ಜೋರಾಗಿ ನಡೆಯುತ್ತಿತ್ತು. ಆದ್ರೆ, ಇದೀಗ ಟಾಸ್ಕ್ ವಿಚಾರವಾಗಿ ಜಿದ್ದಾಜಿದ್ದಿಗೆ ಇಳಿದಿರುವ ಘಟಾನುಘಟಿ ಸ್ಪರ್ಧಿಗಳು, ರಕ್ಷಣೆ ಹೆಸರಲ್ಲಿ ಬಲ ಪ್ರಯೋಗ ಮಾಡಿದ್ದು ಎಂದು ಕಾರಣ ಕೊಡುವಷ್ಟು ಗುದ್ದಾಟ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಮನೆಯೊಳಗೆ ಕನ್ನಡದ ಖ್ಯಾತ ನಿರೂಪಕಿ, ಪತ್ರಕರ್ತೆ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದು, ಬಿಗ್ ಮಂದಿಗೆಲ್ಲ ಭಾರೀ ಅಚ್ಚರಿ ಮೂಡಿಸಿದರು. ತಮ್ಮ ಖಡಕ್ ಮಾತುಗಳಿಂದ ಚೈತ್ರಾ ಕುಂದಾಪುರ ಮತ್ತು ಐಶ್ವರ್ಯಗೆ ಟಕ್ಕರ್​ ನೀಡಿದ ರಾಧಾ, ಮನೆಯ ಇತರೆ ಸ್ಪರ್ಧಿಗಳಿಗೂ ಚಳಿ ಬಿಡಿಸಿದ್ದಾರೆ. ಇನ್ನು ಈ ಮಧ್ಯೆ ಹೊಸ ಪ್ರೋಮೋ ಹೊರಬಿದ್ದಿದ್ದು, ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ದೊಡ್ಡ ಜಟಾಪಟಿಯೇ ನಡೆದುಹೋಗಿದೆ.

ಮಂಜು ಮತ್ತು ತ್ರಿವಿಕ್ರಮ್ ನಡುವೆ ಬಲು ಜೋರಿನ ಕಾಳಗ ನಡೆದರೆ. ಅತ್ತ ಚೈತ್ರಾ ಕೂಡ ತಮ್ಮ ಎದುರಾಳಿಗಳ ವಿರುದ್ಧ ಬಲ ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ನಮ್ಮ ರಕ್ಷಣೆ ಮಾಡಿಕೊಳ್ಳುವ ವೇಳೆ ಬಲ ಪ್ರಯೋಗ ಆಗಿಯೇ ಆಗುತ್ತದೆ ಎಂದು ಹೇಳಿದ್ದಾರೆ. ಇನ್ನು ಎರಡು ತಂಡಗಳ ನಡುವೆ ಕಿತ್ತಾಟ ನಡೆಯುತ್ತಿದ್ದ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಹುನುಮಂತ ಕುಸಿದು ಬಿದ್ದಿದ್ದು, ಆತನನ್ನು ಐಶ್ವರ್ಯ ಮತ್ತು ಮಂಜು ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ,(ಏಜೆನ್ಸೀಸ್).