ನ್ಯೂಸ್

BBKS10: ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ, ಇನ್ಯಾರಿಗೆ ಕ್ಲಾಸ್?

ಬೆಂಗಳೂರು: ಬಿಗ್​ ಬಾಸ್​ ಸೀಸನ್​ 10 ಇದೀಗ ಮೂರನೇ ವಾರದ ಅಂತ್ಯಕ್ಕೆ ತಲುಪಿದ್ದು, ವಾರಾಂತ್ಯದಲ್ಲಿ ನಟ. ನಿರೂಪಕ ಕಿಚ್ಚ ಸುದೀಪ್​ ನಡೆಸಿಕೊಡುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆ ನೋಡಲು ವೀಕ್ಷಕರು ಕಾತರದಿಂದ ಕಾಯತೊಡಗಿದ್ದಾರೆ.

ಈ ವಾರ ಯಾರು ಉತ್ತಮ, ಯಾರು ಕಳಪೆ? ವೀಕೆಂಡ್‌ನಲ್ಲಿ ಸುದೀಪ್​ ಯಾವ ಸ್ಪರ್ಧಿಗೆ ಸೀಸನ್​ 10ರ ಮೊದಲ ಕಿಚ್ಚನ ಚಪ್ಪಾಳೆ ಕೊಡಬಹುದು, ಯಾರಿಗೆ ಕ್ಲಾಸ್​ ತಗೋಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಅದಕ್ಕೂ ಮುನ್ನ ಮನೆಯ ಸದಸ್ಯರೇ ಈ ವಾರದ ಕಳಪೆ ಆಟಗಾರ ಯಾರು? ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡಿದ್ದಾರೆ.

ಈ ವಾರದ ಕಳಪೆ ಹಾಗೂ ಉತ್ತಮ ಪಟ್ಟ ಕೊಡುವ ಪ್ರಕ್ರಿಯೆಯಲ್ಲಿ ತನಿಷಾ ಮತ್ತು ವಿನಯ್ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಅತ್ಯಂತ ಕಳಪೆ ಎಂದು ವಿನಯ್, ತನಿಷಾ ಹೆಸರನ್ನು ಸೂಚಿಸಿದ್ದಾರೆ. ‘ನಾನು ಅಡುಗೆ ಮನೆಯಲ್ಲಿ ಕೆಲಸ ಮಾಡಿದ್ದು ಕಾಣಿಸ್ಲಿಲ್ವಾ?’ ಎಂದು ತನಿಷಾ ಪ್ರಶ್ನಿಸಿದ್ದಾರೆ. ಇದಕ್ಕೆ ವಿನಯ್, ‘ಮನೇಲಿ ಅವ್ರ ಸೌಂಡ್ ಜೋರಿತ್ತು’ ಎಂದರೆ ತನಿಷಾ ಅಷ್ಟೇ ಖಡಕ್ ಆಗಿ, ‘ನಿಮ್ಮ ಸೌಂಡ್ ಇರ್ಲಿಲ್ವಾ ಎಂದು ತಿರುಗೇಟು ನೀಡಿದ್ದಾರೆ.

ಕೊನೆಯಲ್ಲಿ ಜೈಲಿನ ಗೇಟ್ ಓಪನ್ ಆಗಿದೆ. ಹಾಗಾದ್ರೆ ಜೈಲಿನೊಳಗೆ ಬಂಧಿಯಾದ ಸ್ಫರ್ಧಿ ಯಾರು ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಂದಿನ ಸಂಚಿಕೆಯಲ್ಲಿ ಅಡಗಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.