ನ್ಯೂಸ್

BBKS10: ಕಡೆಗೂ ಪ್ರತಾಪ್ ಆಸೆ ಈಡೇರಿಸಿದ ಬಿಗ್ ಬಾಸ್​! 'ಡ್ರೋನ್'​ ಖುಷಿಗೆ ಇಲ್ಲ ಮಿತಿ…

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ ಕಟ್ಟ ಕಡೆಯ ವಾರವನ್ನು ತಲುಪಿದ್ದು, ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಫಿನಾಲೆಯಲ್ಲಿ ಸುದೀಪ್ ಅವರು ನಮ್ಮ ಕೈ ಎತ್ತಿ ವಿನ್ನರ್​ ನೀವೇ ಎಂದು ಘೋಷಿಸಬೇಕು ಎಂಬ ಕನಸ್ಸನ್ನು ಬಹಳ ದಿನದಿಂದ ಕಾಣುತ್ತಿದ್ದವರ ಪೈಕಿ ಮನೆಯೊಳಗೆ ಉಳಿದಿರುವ ಆರು ಸ್ಪರ್ಧಿಗಳಿಗೆ ಮಾತ್ರ ಈ ಕನಸು ಮುಂದುವರೆದಿದೆ. ಸದ್ಯ ಇನ್ನೇನು ಕಡೆಯ ಹಂತದಲ್ಲಿ ತಮ್ಮೊಳಗಿದ್ದ ಆಸೆಯನ್ನು ಮನಬಿಚ್ಚಿ ಹಂಚಿಕೊಂಡ ಸದಸ್ಯರ ಒಂದೊಂದು ಬಯಕೆಯನ್ನು ಬಿಗ್ ಬಾಸ್​ ಈಡೇರಿಸಲು ಪ್ರಾರಂಭಿಸಿದ್ದಾರೆ.

ಟಾಪ್ ಆರು ಸ್ಪರ್ಧಿಗಳಾದ ವಿನಯ್, ಸಂಗೀತಾ, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್​ ಬಿಗ್ ಬಾಸ್​ ಹೇಳಿದಂತೆ ತಮ್ಮ ಮನದಲ್ಲಿದ್ದ ಆಸೆಗಳನ್ನು ಆಲಿಸಿ, ಈಡೇರಿಸಲು ಆದರೆ ಪೂರೈಸುತ್ತೇವೆ ಎಂದಿದ್ದರು. ಅದರಂತೆಯೇ ಇದೀಗ ತುಕಾಲಿ ಸಂತೋಷ್​ ಕೇಳಿದಂತೆ ಒಂದು ದಿನದ ರಾಜನಾಗಿ ಮನೆಯೊಳಗೆ ತಮಗೆ ಅನಿಸಿದಂತೆ ಜೀವಿಸುವ ಅವಕಾಶವನ್ನು ಬಿಗ್ ಬಾಸ್ ಈಡೇರಿಸಿದ್ದಾರೆ.

ಇನ್ನು ಪ್ರತಾಪ್​ ನಾನು ತಯಾರಿಸಿದ ಡ್ರೋನ್ ಮನೆಯನ್ನು ಪ್ರವೇಶಿಸಿಬೇಕು. ಮನೆಯೊಳಗೆ ಅದನ್ನು ನೋಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಇಂದು ಬಿಗ್ ಬಾಸ್​ ಮನೆಯೊಳಗೆ ಪ್ರತಾಪ್ ಅವರ ನೆಚ್ಚಿನ ಡ್ರೋನ್​ ಅನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಪ್ರತಾಪ್ ಭಾವುಕರಾಗಿ, ಧನ್ಯವಾದ ತಿಳಿಸಿದ್ದಾರೆ.