ನ್ಯೂಸ್

BBKS10: ತಲೆ ಬೋಳಿಸಬೇಕು!; ಸವಾಲಿಗೆ ಸವಾಲು, ಮಾತಿಗೆ ಮಾತು!

ಮೋಹನ್​ ಶೆಟ್ಟಿ

ಬೆಂಗಳೂರು: ಕನ್ನಡದ ಬಿಗ್​ ಬಾಸ್​ ಸೀಸನ್​ 10 ಇದೀಗ ಏಳನೇ ವಾರಕ್ಕೆ ಕಾಲಿಟ್ಟಿದ್ದು, ಡಬಲ್​ ಎಲಿಮಿನೇಷನ್​ ಬಳಿಕ ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ಎದುರಾಗಿದೆ.

ತಂಡಗಳಾಗಿ ಇದ್ದವರು ಇದೀಗ ಬೇರ್ಪಟ್ದಿದ್ದಾರೆ. ಒಂದೇ ದೇಹ ಎಂಬಂತೆ ಇದ್ದ ಸ್ನೇಹಿತರು ಸದ್ಯ ಆ ಜನ್ಮದ ವೈರಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಈ ಬಿಸಿ ಬಿಸಿ ವಾತಾವರಣದ ಮಧ್ಯೆಯೇ ಬಿಗ್​ ಬಾಸ್​ ಕೊಟ್ಟ ವಾರದ ಮೊದಲ ಸವಾಲು ಸ್ವೀಕರಿಸುವಂತ ಟಾಸ್ಕ್​ ಈಗ ಎರಡು ತಂಡಗಳ ಮಧ್ಯೆ ಭಾರೀ ಕಿಚ್ಚನ್ನು ಹಚ್ಚಿಸಿದೆ.

ಈ ಸವಾಲಿನ ಟಾಸ್ಕ್​ನಲ್ಲಿ ಎರಡು ತಂಡಗಳಾಗಿ ವಿಂಗಡನೆಯಾಗಿರುವ 'ಗಜಕೇಸರಿ' ಹಾಗೂ 'ಸಂಪತ್ತಿಗೆ ಸವಾಲ್​' ಟೀಮ್​​ನ ಸದಸ್ಯರು ಸಿಕ್ಕಾಪಟ್ಟೆ ಜಿದ್ದಾಜಿದ್ದಿಗೆ ಇಳಿದಿದ್ದು, ಮಾತಿನ ತೀವ್ರತೆ, ಪದಬಳಕೆ ಮಿತಿ ಮೀರಿದೆ. ಏಕವಚನದ ದಾಳಿ ಶುರುವಾಗಲು ಸಂಗೀತಾ ಕೊಟ್ಟ ಸವಾಲೇ ಕಾರಣವಾಗಿದೆ.

ತುಕಾಲಿ ಸಂತೋಷ್​ ಮತ್ತು ಕಾರ್ತಿಕ್​ ಇಬ್ಬರು ಕೂಡ ತಮ್ಮ ತಲೆಯನ್ನು ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಸವಾಲು ಎಸೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ತನಿಶಾ, ಇಬ್ಬರ ಬದಲಿಗೆ ಒಬ್ಬರನ್ನು ಪರಿಗಣಿಸಬಹುದಲ್ವಾ ಎಂದು ಕೇಳಿದ್ದಾರೆ.

ಈ ವೇಳೆ ತನಿಶಾ ಮತ್ತು ನಮ್ರತಾ ಮಧ್ಯೆ ಏಕವಚನದ ಮಾತುಗಳು ಮತ್ತೊಮ್ಮೆ ಮನೆಯಲ್ಲಿ ಸದ್ದು ಮಾಡಿದೆ. ಈ ವಿಚಾರ ಸ್ಪರ್ಧಿಗಳಲ್ಲಿ ಗೊಂದಲ ಮೂಡಿಸಿದ್ದು, ಏನಾಗುತ್ತಿದೆ ಎಂದು ಅಚ್ಚರಿಯಿಂದ ಪರಸ್ಪರ ನೋಡಿಕೊಳ್ಳುವಂತೆ ಮಾಡಿದೆ. ಈ ವಾಗ್ವಾದ ಯಾವ ಹಂತವನ್ನು ತಲುಪಿದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.