ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 10ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯೊಳಗೆ ಸದಸ್ಯರ ನಡುವೆ ರಾಕ್ಷಸ ಮತ್ತು ಗಂಧರ್ವರ ಗುಣ ಸ್ಪೋಟಗೊಳ್ಳುತ್ತಿದೆ. ರಾಕ್ಷಸರು ಮತ್ತು ಗಂಧರ್ವರ ನಡುವಿನ ಟಾಸ್ಕ್ನಲ್ಲಿ ಎರಡು ತಂಡಗಳಲ್ಲಿ ಬಿರುಸಿನ ವಾಗ್ವಾದ ತಾರಕಕ್ಕೇರಿದೆ. ಒಂದೆಡೆ ಗಂಧರ್ವರಾಗಿ ತಂಡದಲ್ಲಿದ್ದ ವಿನಯ್ ಪಾತ್ರದಿಂದ ಹೊರಬರದೆ ಆಡುತ್ತಿದ್ದರೇ, ಮತ್ತೊಂದೆಡೆ ರಾಕ್ಷಸರ ಆರ್ಭಟದಲ್ಲಿ ಕಾರ್ತಿಕ್ ಮಿಂಚಿದ್ದಾರೆ. ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಈ ಚಟುವಟಿಕೆಯಲ್ಲಿ ಕಾರ್ತಿಕ್ ಮೇಲೆ ವಿನಯ್ ಆರೋಪವೊಂದನ್ನು ಎಸಗಿದರು.
ರಾಕ್ಷಸರಾಗಿ ಆಡುತ್ತಿದ್ದ ಕಾರ್ತಿಕ್ ತಂಡದೊಂದಿಗೆ ಗಂಧರ್ವರಾಗಿದ್ದ ವಿನಯ್ ಪರಸ್ಪರ ಜಟಾಪಟಿ ನಡೆಸಿದರು. ಎದುರಾಳಿಗಳ ಭಾವುಟ ಕಿತ್ತು ಹಾಕಬೇಕು ಎಂಬ ಟಾಸ್ಕ್ನಲ್ಲಿ ಕಾರ್ತಿಕ್ ಮತ್ತು ವಿನಯ್ ದೈಹಿಕವಾಗಿ ಜಿದ್ದಾಜಿದ್ದಿಗೆ ಇಳಿದರು. ಕೆಲ ಸಮಯ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಸಮರ ಕೂಡ ಸಾರಿದರು.
ಇದಾದ ಬಳಿಕ ಗಂಧರ್ವರಿಗೆ ನೀರು ಎರಚಿ, ಅವರನ್ನು ಕೊಟ್ಟಿರುವ ಸಮಯದೊಳಗೆ ಎಬ್ಬಿಸಬೇಕು ಎಂಬುದು ಟಾಸ್ಕ್ನ ನಿಯಮವಾಗಿತ್ತು. ಈ ವೇಳೆ ಪವಿ ಅವರಿಗೆ ನಿರಂತರವಾಗಿ ನೀರಿನ ದಾಳಿ ಮಾಡುವಾಗ, ಕಾರ್ತಿಕ್ ಮತ್ತು ವಿನಯ್ ನಡುವೆ ಮಾತಿನ ಚಕಮಕಿ ಎದುರಾಯಿತು.
ಇದನ್ನೂ ಓದಿ: ಪಠಾಣ್, ಜವಾನ್ ನಂತರ ಶಾರುಖ್ ಅಭಿನಯದ ‘ಡಂಕಿ’ ಸೂಪರ್ ಹಿಟ್ ಆಗಲಿದೆಯೇ?; ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಸಿನಿಮಾ ಟ್ರೇಲರ್
ಈ ವೇಳೆ ಧ್ವನಿ ಹೊರಡಿಸದೆ, ತುಟಿ ಆಡಿಸಿದ ಕಾರ್ತಿಕ್ ವಿರುದ್ಧ ರೊಚ್ಚಿಗೆದ್ದ ವಿನಯ್ ಕೆಟ್ಟು ಶಬ್ದಗಳ ಬಳಕೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, "ನಾನು ಆ ರೀತಿಯ ಪದ ಬಳಸಿಲ್ಲ, ಮೈಮ್ ಮಾಡಿದ್ದು, ವಿಡಿಯೋ ರಿಪೀಟ್ ಮಾಡಿ ನೋಡಿ, ಹಾಗೇನು ಅಂದಿದ್ರೆ ಈಗಲೇ ಬಿಗ್ ಬಾಸ್ ಆದೇಶ ಹೊರಡಿಸಲಿ, ಡೋರ್ ಓಪನ್ ಮಾಡಲಿ ಮನೆಯಿಂದ ಹೊರ ಹೋಗ್ತೀನಿ" ಎಂದು ಹೇಳಿದ ಕಾರ್ತಿಕ್ ಇತರೆ ಸ್ಪರ್ಧಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ.