ಬೆಂಗಳೂರು: ಬಿಗ್ಬಾಸ್ (BiggBoss) ಸೀಸನ್ 11ರ ಮಾಜಿ ಸ್ಫರ್ಧಿ ಜಗದೀಶ್ (Jagadish) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಪ್ರಸ್ತುಇತ ವಿದ್ಯಮಾನಗಳ ಕುರಿತು ತಮ್ಮದೇ ಶೈಲಿಯಲ್ಲಿ ರಿಯಾಕ್ಟ್ ಮಾಡುವ ಜಗದೀಶ್ ಈ ಸಂಬಂಧ ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ಇದೀಗ ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Annamalai) ಅವರನ್ನು ಗೇಲಿ ಮಾಡಿರುವ ಜಗದೀಶ್ (Jagadish) ಕಾರಣವನ್ನು ಉಲ್ಲೇಖಿಸಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಡಿಎಂಕೆ ಪಕ್ಷದ ವಿರುದ್ಧ ಆರೋಪಿಸಿ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದರು. ಇದನ್ನು ಅಣಕಿಸಿರುವ ಬಿಗ್ಬಾಸ್ ಮಾಜಿ ಸ್ಫರ್ಧಿ ಜಗದೀಶ್ (Jagadish) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ನೋಡುವುದಾದರೆ ಜಿಎಸ್‌ಟಿ ವಿರುದ್ಧ ನಾನು ಪ್ರತಿಭಟಿಸುತ್ತಿದ್ಧೇನೆ. ಪೆನ್ನು, ಪೆನ್ಸಿಲ್, ರಬ್ಬರ್ ಮೇಲೆ ಜಿಎಸ್‌ಟಿ ಹಾಕಿರುವುದನ್ನು ಖಂಡಿಸಿ ನನಗೆ ನಾನೇ ಶಿಕ್ಷಿಸಿಕೊಳ್ಳುತ್ತಿದ್ದೇನೆ. ಚಡಿ ಏಟಿನ ಮೂಲಕ ಪ್ರತಿಭಟಿಸುತ್ತಿದ್ದೇನೆ. ನನ್ನ ಹೆಸರು ಸ್ವರ್ಣಮಲೈ ಅಲ್ಲದೆ ಟೀ ಮಾರುವವರು ಎಲ್ಲದರ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ಮುಂದೆ ನಮ್ಮ ಅಂಗಾಂಗಳಿಗೂ ಜಿಎಸ್‌ಟಿ ಹಾಕಬಹುದು. ಆ ಮಟ್ಟಕ್ಕೆ ಸೀತಾರಾಮನ್ ಅವರು ಬಂದಿದ್ದಾರೆ. ಹಾಗಾಗಿ ಜಿಎಸ್‌ಟಿ ವಿರುದ್ಧ ನನ್ನ ಪ್ರತಿಭಟನೆ ಎಂದು ಪಂಚೆಯಲ್ಲಿ ಸುತ್ತಿ ಹೊಡೆದುಕೊಂಡಂತೆ ವಿಡಿಯೋ ಮಾಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವರು ಜಗದೀಶ್ (Jagadish) ಅವರ ನಡೆಯನ್ನು ಖಂಡಿಸಿ ಪರ-ವಿರೋಧದ ಕಮೆಂಟ್ಗಳನ್ನು ಹಾಕುತ್ತಿದ್ದು, ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವವರನ್ನು ಅಣಕಿಸುವುದು ಸರಿಯಲ್ಲ ಎಂದು ಕಮೆಂಟ್ ಹಾಕಿದ್ದಾರೆ.