ನ್ಯೂಸ್

BBK11: ಸೂಟ್​ಕೇಸ್​ ಹೊತ್ತು 'ಬಿಗ್' ಮನೆಗೆ ಗುಡ್​ಬೈ ಹೇಳಿದ ಗೌತಮಿ! ಫಿನಾಲೆ ಓಟ ಮೊಟಕು

BBK11: ಇಂದು ಬಿಗ್ ಬಾಸ್​ ಸೀಸನ್​ 11ರ ಟ್ರೋಫಿ ರಿವೀಲ್ ಮಾಡಿದ ಕಿಚ್ಚ ಸುದೀಪ್​, ಮನೆ ಮಂದಿಗೆಲ್ಲಾ ಗ್ರ್ಯಾಂಡ್​ ಫಿನಾಲೆ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ಫಿನಾಲೆ ಹಂತ ತಲುಪಿರುವ ತ್ರಿವಿಕ್ರಮ್, ಹನುಮಂತು ಮತ್ತು ಮೋಕ್ಷಿತಾ ಜತೆಗೆ ಯಾರಿಬ್ಬರು ಗ್ರ್ಯಾಂಡ್​ ಫಿನಾಲೆ ವೇದಿಕೆ ಹತ್ತಲಿದ್ದಾರೆ ಎಂಬ ಪ್ರಶ್ನೆಗಳ ಮಧ್ಯೆ ಇದೀಗ ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಗೌತಮಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಫಿನಾಲೆ ಓಟದಿಂದ ಹೊರಬಿದ್ದ ಗೌತಮಿ ಜಾದವ್​, ಸುದೀಪ್ ಮಾತಿನಿಂತೆ ಸೂಟ್​ಕೇಸ್​ ತೆರೆದು ನೋಡಿದಾಗ ಅದರಲ್ಲಿ ತಮ್ಮ ಹೆಸರು ನೋಡಿ ಬೇಸರಗೊಂಡರು.