ಮುದಗಲ್‌ನಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಭಾನುವಾರ ನಡೆಯಿತು. ತಿಮ್ಮಾಪೂರು ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಮಾಟೂರು, ವೀರಶೈವ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ್, ಸಿದ್ದಯ್ಯಸ್ವಾಮಿ ಸಾಲಿಮಠ ಇತರರಿದ್ದರು. 
ನ್ಯೂಸ್

ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಬಸವಣ್ಣ ಭಾವಚಿತ್ರ ಮೆರವಣಿಗೆ ಅದ್ದೂರಿ

Gangavati - Desk - Veeresh S Ullagaddi

ಮುದಗಲ್: ಪಟ್ಟಣದಲ್ಲಿ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ವಿಶ್ವಗುರು ಬಸವಣ್ಣ ಭಾವಚಿತ್ರ ಮೆರವಣಿಗೆ 501 ಪೂರ್ಣಕುಂಭ, ಕಳಸದೊಂದಿಗೆ ಭಾನುವಾರ ಜರುಗಿತು.

ನಂದಿ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ

ಬೆಳಗ್ಗೆ ದೇವಸ್ಥಾನದಲ್ಲಿ ನಂದಿ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ನಡೆದ ಮೆರವಣಿಗೆಯಲ್ಲಿ ಆಮದಿಹಾಳ ಕಣಿವಾದ್ಯ ಮನಸೊರೆಗೊಳಿಸಿತು. ಕಣ್ಣೂರು ಮಹಿಳಾ ಕಲಾತಂಡದಿಂದ ಡೊಳ್ಳಿನ ಕುಣಿತ ನೋಡುಗರ ಕಣ್ಮನ ಸೆಳೆಯಿತು. ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ ಸಾಲಿಮಠ ಡೊಳ್ಳು ಬಾರಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಬಳಿಕ ದೇವಸ್ಥಾನದಲ್ಲಿ ಕಳಸಾರೋಹಣ, ಮಹಾಪ್ರಸಾದ, ಸಂಜೆ ಮಹಿಳೆಯರಿಂದ ರಥೋತ್ಸವ ಜರುಗಿತು.


ಪ್ರಮುಖರಾದ ಲಿಂಗಪ್ಪ ಹಣಗಿ, ಶಿವಪ್ಪ ಸುಂಕದ, ಮಹಾಂತೇಶ ಪಾಟೀಲ್, ಮಹೇಶ ವಸ್ತ್ರದ್, ಚಂದ್ರಣ್ಣ ಗಂಗಾವತಿ, ಈರಪ್ಪ ಗುಡೂರು, ಉದಯಕುಮಾರ ಕಮ್ಮಾರ, ಸಂತೋಷ ಸುರಪುರ, ಶರಣಪ್ಪ ಸಜ್ಜನ್, ಶರಣಪ್ಪ ಕುಂಬಾರ, ಈರಪ್ಪ ಹಡಪದ ಇತರರಿದ್ದರು.