ನ್ಯೂಸ್

ಸಚಿವ ಸಂಪುಟ ವಿಸ್ತರಣೆ ನಂತರ ಸೀಕ್ರೇಟ್ ಬಾಂಬ್​ ಸಿಡಿಸುತ್ತಾರಂತೆ ಶಾಸಕ ಯತ್ನಾಳ್​!

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್​.ಆರ್​ ಸಂತೋಷ್​ ಅವರು ಆತ್ಮಹತ್ಯೆ ಪ್ರಯತ್ನಿಸಿದ್ದು, ನಂತರ ಓವರ್​ ಡೋಸ್​ ಕಥೆ ಹೇಳಿರುವುದು ನಿಮಗೆ ಗೊತ್ತೇ ಇದೆ. ಆದರೆ ಈ ಕಥೆಯಲ್ಲಿ ಬಹುದೊಡ್ಡ ಸೀಕ್ರೇಟ್​ ಒಂದು ಅಡಗಿರುವುದಾಗಿ ಶಾಸಕ ಬಸನಗೌಡ ಪಾಟಿಲ್​ ಯತ್ನಾಳ್​ ಹೇಳಿದ್ದಾರೆ.

ಸಂತೋಷ್​ ಆತ್ಮಹತ್ಯೆ ಪ್ರಯತ್ನದ ಹಿಂದೆ ಭಾರಿ ದೊಡ್ಡ ಕಥೆಯಿದೆ. ಎಲ್ಲ ಘಟನಾವಳಿಗಳು ನನಗೆ ಗೊತ್ತಿದೆ. ಕಾಲ ಬಂದಾಗ ಎಲ್ಲವನ್ನ ನಾನು ಹೇಳ್ತೇನೆ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಲಿ, ಆಮೇಲೆ ಎಲ್ಲವನ್ನು ವಿಚಾರವನ್ನು ಬಹಿರಂಗ ಮಾಡುತ್ತೇನೆ ಎಂದು ಯತ್ನಾಳ್​ ತಿಳಿಸಿದ್ದಾರೆ.