Worst Critically: ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿಷೇಧಗಳು, ವಿವಾದಗಳು ಇದು ಚಿತ್ರ ನಿರ್ದೇಶಕರಿಗೆ, ನಟರಿಗೆ ಹೊಸದೇನಲ್ಲ. ಆದರೆ, ಈ ಹಿಂದೆ ಬಿಡುಗಡೆಯಾದ ಚಿತ್ರವೊಂದು ಇಲ್ಲಿಯವರೆಗಿನ ಅತ್ಯಂತ ಕೆಟ್ಟ ವಿಮರ್ಶಾತ್ಮಕ ಚಿತ್ರ ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಹೌದು, ಅದು ಸಾಲೋ ಅಥವಾ 120 ಡೇಸ್ ಆಫ್ ಸೊಡೊಮ್(120 Days of Sodom). ಮೂಲತಃ ಇಟಾಲಿಯನ್ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರವನ್ನು 150 ದೇಶಗಳಲ್ಲಿ ನಿಷೇಧಿಸಲಾಯಿತು ಮತ್ತು ಬಿಡುಗಡೆಯಾದ ನಂತರ, ನಿರ್ದೇಶಕ ಪಿಯರ್ ಪಾವೊಲೊ ಪಸೋಲಿನಿ ಅವರನ್ನು ಕೊಲೆ ಮಾಡಲಾಯಿತು.
1975 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಅದರ ಕಥೆ, ದೃಶ್ಯಗಳು ಮತ್ತು ವಿವಾದಗಳಿಂದಾಗಿ 150 ದೇಶಗಳಲ್ಲಿ ನಿಷೇಧಿಸಲಾಯಿತು.
ಪಿಯರ್ ಪಾವಲೋ ಪಸಲೋನಿ ನಿರ್ದೇಶಿಸಿದ ಈ ರಾಜಕೀಯ ಕಲಾಚಿತ್ರವು ಮಾರ್ಕ್ವಿಸ್ ಡೇಸ್ ಬರೆದ 1785ರ 120 ಡೇಸ್ ಆಫ್ ಸೊಡೊಮ್ ಕಾದಂಬರಿಯನ್ನು ಆಧಾರಿಸಿದೆ. ಎರಡನನೇ ಮಹಾಯುದ್ಧದ ಹಿನ್ನೆಲೆಯಲ್ಲಿ, ಈ ಕಥೆಯು ನಾಲ್ಕು ಶ್ರೀಮಂತ ಮತ್ತು ಭ್ರಷ್ಟ ಪುರುಷರ ಸುತ್ತ ಕಥೆ ಎಣೆದಿದೆ. ಈ ನಾಲ್ಕು ಜನರು 18 ಯುವಕರು ಮತ್ತು ಮಹಿಳೆಯರನ್ನು ಅಪಹರಿಸಿ ನಾಲ್ಕು ತಿಂಗಳ ಕಾಲ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಚಿತ್ರಹಿಂಸೆ ನೀಡುತ್ತಾರೆ.
ಸಲೋ, ಅಥವಾ 120 ಡೇಸ್ ಆಫ್ ಸೊಡೊಮ್, ನಾಜಿಗಳಿಂದ ಕೈಗೊಂಬೆಗಳಾಗಿ ಪರಿವರ್ತಿಸಲ್ಪಟ್ಟ ಮಕ್ಕಳ ಅಪಹರಣವನ್ನು ಚಿತ್ರಿಸುತ್ತದೆ. ಈ ಚಿತ್ರವು ಲೈಂಗಿಕ ದೌರ್ಜನ್ಯ, ದುಃಖ, ಕ್ರೂರ ಚಿತ್ರಹಿಂಸೆ ಮತ್ತು ಅಪಹರಿಸಲ್ಪಟ್ಟ ಮಕ್ಕಳ ಕೊಲೆಯಂತಹ ಹಿಂಸೆಯ ದೃಶ್ಯಗಳನ್ನು ಸಹ ಒಳಗೊಂಡಿದೆ. ಚಿತ್ರದ ನಿರ್ದೇಶಕ ಪಿಯರ್ ಪಾವೊಲೊ ಪಸೋಲಿನಿ ಅವರನ್ನು ಚಿತ್ರ ಬಿಡುಗಡೆಯಾದ ಕೆಲವು ದಿನಗಳ ನಂತರ ಕೊಲೆ ಮಾಡಲಾಯಿತು ಎಂದು ಹೇಳಲಾಗಿದೆ.(ಏಜೆನ್ಸೀಸ್)