ಕೋಲಾರ ತಾಲೂಕಿನ ಕಡಗಟ್ಟೂರು ವಿವಿದ್ದೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದಿAದ ಬುಧವಾರ ಹಮ್ಮಿಕೊಂಡಿದ್ದ ಸಾಲದ ವಿತರಣಾ ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಕಡಗಟ್ಟೂರು ದಯಾನಂದ್ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಮುನೀಶ್ವರಪ್ಪ, ಮಂಜುನಾಥ್ ಇತರರಿದ್ದರು. 
ನ್ಯೂಸ್

ಸಾಲ ವಿತರಿಸುವ ಶಕ್ತಿ ಕಳೆದುಕೊಳ್ಳುತ್ತಿರುವ ಬ್ಯಾಂಕ್‌ಗಳು

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ವಿಳಂಬದಿಂದ ಸಹಕಾರ ಬ್ಯಾಂಕ್‌ಗಳು ಸಾಲ ನೀಡುವ ಶಕ್ತಿ ಕಳೆದುಕೊಳ್ಳುತ್ತಿವೆ ಎಂದು ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಕಡಗಟ್ಟೂರು ದಯಾನಂದ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದಿAದ ಬುಧವಾರ ಹಮ್ಮಿಕೊಂಡಿದ್ದ 1.6 ಕೋಟಿ ರೂ. ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

ಬ್ಯಾಂಕಿನ ಆಡಳಿತ ಮಂಡಳಿ ಅವಧಿ ಮುಗಿದಿದ್ದು, ಕಾಣದ ಕೈಗಳು ಚುನಾವಣೆಗೆ ಅಡ್ಡಿ ಪಡಿಸುತ್ತಿವೆ. ಒಂದು ಕಾಲದಲ್ಲಿ ರಾಜಕೀಯ ಲಾಭಕ್ಕಾಗಿ ಬ್ಯಾಂಕ್ ಬೇಕಾಗಿತ್ತು. ಈಗ ಅದೇ ಬ್ಯಾಂಕಿನ ವ್ಯವಸ್ಥೆ ಕೆಡಿಸಲು ಕೆಲವರು ಮುಂದಾಗಿದ್ದಾರೆ. ಇದರಿಂದಾಗಿ ಅವರಿಗೇನೂ ತೊಂದರೆಯಾಗುವುದಿಲ್ಲ. ರೈತರ ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಮಂಡಳಿ ಇಲ್ಲದ ಕಾರಣ ಮಹಿಳಾ ಸಂಘಗಳಿಗೆ, ರೈತರಿಗೆ ಸಮರ್ಪಕವಾಗಿ ಸಾಲ ನೀಡಲಾಗುತ್ತಿಲ್ಲ. ಸೊಸೈಟಿಗಳ ಸ್ವಂತ ಶಕ್ತಿ ಮೇರೆಗೆ ಸಾಲ ನೀಡಲಾಗುತ್ತಿದೆ. ಜನರಿಗೆ ಸಹಾಯ ಮಾಡಲು ಅಧಿಕಾರಿಗಳಿಗೆ ಆಸಕ್ತಿ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

* 900 ಕೋಟಿಗೆ ಇಳಿಕೆ

ಬ್ಯಾಂಕಿನಲ್ಲಿ 1,500 ಕೋಟಿ ರೂ. ವ್ಯವಹಾರ ನಡೆಯುತ್ತಿತ್ತು, ಈಗ ಅದು 900 ಕೋಟಿ ರೂ.ಗೆ ಇಳಿಕೆಯಾಗಿದೆ. ನಬಾರ್ಡ್ನಿಂದ ಜಿಲ್ಲೆಗೆ 156 ಕೋಟಿ ರೂ.ಸಾಲ ನೀಡುತ್ತಿದ್ದರು. ಈಗ 69 ಕೋಟಿಗೆ ಇಳಿಕೆ ಮಾಡಿದ್ದಾರೆ. ಆಡಳಿತ ಮಂಡಳಿ ಇದ್ದಿದ್ದರೆ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ತಂದು ಸಾಲದ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಸರ್ಕಾರ ರೈತರ, ಮಹಿಳೆಯರ ಹಿತ ದೃಷ್ಟಿಯಿಂದ ಬ್ಯಾಂಕ್‌ಗೆ ಸಕಾಲಕ್ಕೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಕಡಗಟ್ಟೂರು ದಯಾನಂದ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಇಚೆಗೆ ಜಾರಿಗೆ ತಂದಿರುವ ಸಹಕಾರ ಕಾಯ್ದೆಗಳು ಸೊಸೈಟಿ, ಸಹಕಾರ ಬ್ಯಾಂಕ್‌ಗಳ ಮೇಲೆ ಪರಿಣಾಮ ಬೀರುತ್ತಿವೆ. ಇದು ದೇಶದ ಜಿಡಿಪಿ ಮೇಲೆ ಹೊಡೆತ ಬೀಳುತ್ತಿದೆ. ಈ ಬಗ್ಗೆ ತಿಳಿವಳಿಕೆ ನೀಡಲು ಅಧಿಕಾರಿಗಳಿಗೆ ಅಸಕ್ತಿ ಇರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಡೇವಿಡ್, ಸಿಇಒ ಮುನೀಶ್ವರಪ್ಪ, ಮುಖಂಡ ಮಂಜುನಾಥ್ ಮತ್ತಿತರರು ಹಾಜರಿದ್ದರು.