ನವದೆಹಲಿ: ಹೆಚ್ಚುತ್ತಿರುವ ಬ್ಯಾಂಕಿಂಗ್ ವಂಚನೆಗಳನ್ನು ತಡೆಯಲು ಹಾಗೂ ಗ್ರಾಹಕರಿಗೆ ಅಧಿಕ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ವಂಚನೆ ರಿಜಿಸ್ಟ್ರಿ ರಚಿಸಲು ಆರ್ಬಿಐ ಚಿಂತನೆ ನಡೆಸಿದೆ. ವಂಚಕ ವೆಬ್ಸೈಟ್ಗಳು, ೋನ್ಗಳು ಮತ್ತು ಡಿಜಿಟಲ್ ವಂಚನೆ ನಡೆಸಲು ಬಳಸಲಾಗುವ ವಿವಿಧ ವಿಧಾನಗಳ ಡೇಟಾಬೇಸ್ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ವಂಚಕ ವೆಬ್ಸೈಟ್ ಅಥವಾ ೋನ್ ಸಂಖ್ಯೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದರಿಂದ ಅವುಗಳು ವಂಚನೆಯನ್ನು ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಆರ್ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ್ರಾಡ್ ರಿಜಿಸ್ಟ್ರಿ ರಚಿಸಲು ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಆರ್ಬಿಐನ ಪಾವತಿ ಮತ್ತು ಇತ್ಯರ್ಥ ಹಾಗೂ ಮೇಲುಸ್ತುವಾರಿ ಇಲಾಖೆಗಳ ಸಹಿತ ಸಂಬಂಧಪಟ್ಟ ವಿವಿಧ ವಿಭಾಗಗಳೊಂದಿಗೆ ಸದ್ಯಕ್ಕೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.
ನಿಗಾಕ್ಕೆ ಅನುಕೂಲವಾಗಲು ಪಾವತಿ ವ್ಯವಸ್ಥೆಯ ಭಾಗಿದಾರರು ಈ ರಿಜಿಸ್ಟ್ರಿಗೆ ಪ್ರವೇಶ ಪಡೆಯಬಹುದಾಗಿರುತ್ತದೆ.
ಕ್ರೆಡಿಟ್ ಇನ್ಮೇರ್ಶನ್ ಕಂಪನಿಯ (ಸಿಐಸಿ) ಗ್ರಾಹಕರು 2021ರ ರಿಸರ್ವ್ ಬ್ಯಾಂಕ್ -ಸಮಗ್ರ ಒಂಬುಡ್ಸ್ಮನ್ ಯೋಜನೆ (ಆರ್ಬಿ-ಐಒಎಸ್) ಅಡಿ ಬರಲಿದ್ದಾರೆ ಎಂದೂ ಶರ್ಮಾ ವಿವರಿಸಿದ್ದಾರೆ.
ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳ ಸೇವಾ ನ್ಯೂನತೆ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಸಮಗ್ರ ಗ್ರಾಹಕ ದೂರು ಪರಿಹಾರ ವ್ಯವಸ್ಥೆಗೆ ಚಾಲನೆ ನೀಡಿದ್ದರು.