ನ್ಯೂಸ್

ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

ಹೈದರಾಬಾದ್​: ಇಡೀ ಜಗತ್ತನ್ನೇ ಬಾಧಿಸಿರುವ ಮಹಾಮಾರಿ ಕರೊನಾ ವೈರಸ್​ ಪ್ರಕರಣಗಳು ಇಳಿಮುಖ​ವಾಗುತ್ತಿರುವುದು ಸಂತಸದ ವಿಚಾರ. ಇನ್ನೊಂದೆಡೆ ಲಸಿಕೆಗಳು ಸಹ ಹೊರ ಬರುತ್ತಿದ್ದು, ಜನರಲ್ಲಿನ ಭಯದ ವಾತಾವರಣ ದೂರವಾಗುತ್ತಿದೆ.

ಇಂತಹ ಭರವಸೆಯ ಸಮಯದಲ್ಲಿ ಎಸ್​ಬಿಐ ಬ್ಯಾಂಕ್​ ಉದ್ಯೋಗಿಯೋಬ್ಬರು ಕರೊನಾ ಭಯಕ್ಕೆ ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ತುಂಬಾ ಆರೋಗ್ಯವಾಗಿಯೇ ಇದ್ದ ಹೈದರಾಬಾದ್​ ಮೂಲದ ಯುವತಿ ರುಬ್ಬಾ ವಾಣಿ ಕರೊನಾ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಣಿ ಅವರು ಕರೀಮ್​ನಗರದ ಮಂಕಮ್ಮಟೋಟಾ ಶಾಖೆಯಲ್ಲಿ ಎಸ್​ಬಿಐ ಪ್ರಬೋಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಟಿಆರ್​ಎಸ್​ ನಾಯಕನ ಮನೆಯನ್ನು ಬಾಡಿಗೆ ಪಡೆದು ನೆಲೆಸಿದ್ದರು.

ಕರೊನಾ ವೈರಸ್​ನಿಂದ ಕಳೆದ ತಿಂಗಳಷ್ಟೇ ವಾಣಿ ಅವರ ತಂದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅವರ ತಾಯಿಗೂ ಕರೊನಾ ಪಾಸಿಟಿವ್​ ವರದಿಯಾಗಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಾಣಿ ತನಗೂ ಕರೊನಾ ತಗುಲಬಹುದೆಂಬ ಭಯದಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ಮನೆಯಲ್ಲಿ ಪತ್ತೆಯಾಗಿರುವ ಡೆತ್​ನೋಟ್​ನಲ್ಲಿ ಕರೊನಾ ಭಯದ ಉಲ್ಲೇಖವಾಗಿದೆ. ತಂದೆಯ ಸಾವಿನ ನೋವೇ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಕರೊನಾ ಮರೆಯಾಗುತ್ತಿರುವ ಸಮಯದಲ್ಲಿ ಒಳ್ಳೆಯ ಉದ್ಯೋಗವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಾಣಿ ನಿರ್ಧಾರ ತಪ್ಪು ಎಂಬುದು ಜನರ ಮಾತಾಗಿದೆ. (ಏಜೆನ್ಸೀಸ್​)