ಪಶ್ಚಿಮ ಬಂಗಾಳ: ಬಾಂಗ್ಲಾದೇಶದ ಆವಾಮಿ ಲೀಗ್ ಪಕ್ಷದ ಸಂಸದ ಅನ್ವರುಲ್ ಅಜೀಂ ಅನಾರ್ ಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ತಂಡವು ಬಂಗಾಳದ ದಕ್ಷಿಣ 24 ಪರಗಣದ ಕಾಲುವೆಯೊಂದರಿಂದ ಮಾನವ ಮೂಳೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೋದಿಗೆ ಶುಭ ಕೋರಿದ ಡಿವೈನ್ ಸ್ಟಾರ್: ದೇಶದ ಸುರಕ್ಷತೆಯ ಕಡೆಗಿನ ನಿಮ್ಮ ಬದ್ಧತೆಗೆ ನಾವು ಧನ್ಯರು ಎಂದ ರಿಷಬ್
ಅನಾರ್ ದೇಹವನ್ನು 80 ತುಂಡುಗಳಾಗಿ ಕತ್ತರಿಸಿ ಕೆಲವು ತುಂಡುಗಳಿಗೆ ಅರಿಶಿನ ಲೇಪಿಸಿ, ಕೋಲ್ಕತ್ತದ ನ್ಯೂ ಟೌನ್ನ ಸುತ್ತಮುತ್ತಲಿನ ಕಾಲುವೆ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದರು.
ಫ್ಲಾಟ್ನ ಸೆಪ್ಟಿಕ್ ಟ್ಯಾಂಕ್ನಿಂದ ಹೊರ ತೆಗೆದಿದ್ದ ಮೃತದೇಹದ ತುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಸಿಯಾಮ್ ಹೊಸೈನ್ನ ವಿಚಾರಣೆ ನಡೆಸಿದ ಬಳಿಕ ತನಿಖಾ ಸಂಸ್ಥೆ ನಡೆಸಿದ ಹುಡುಕಾಟದಲ್ಲಿ ಮೂಳೆಗಳು ದೊರೆತಿವೆ.
ಬಾಂಗ್ಲಾದೇಶದ ಪ್ರಜೆ ಹೊಸೈನ್ ಎಂಬಾತನನ್ನು ಶುಕ್ರವಾರ (ಜೂನ್ 7) ಬಂಧಿಸಲಾಗಿದೆ. ಈ ಹಿಂದೆ ಬಾಂಗ್ಲಾದೇಶಿ ವಲಸಿಗ ಜಿಹಾದ್ ಹವ್ಲಾದರ್ ಎಂಬಾತನನ್ನು ಬಂಗಾಳ ಸಿಐಡಿ ಬಂಧಿಸಿದ ನಂತರ ನಂತರ ಈತನನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿ ವಿಚಾರಣೆ ವೇಳೆ, ಬಾಂಗ್ಲಾದೇಶ ಸಂಸದನ ದೇಹದ ಭಾಗಗಳನ್ನು ಎಸೆದಿರುವ ನಿಖರವಾದ ಸ್ಥಳವನ್ನು ಸಿಯಾಮ್ ಹೊಸೈನ್ ಸಿಐಡಿಗೆ ಬಹಿರಂಗಪಡಿಸಿದ್ದಾರೆ.
ಶನಿವಾರ (ಜೂನ್ 8) ರಾತ್ರಿ ವಿಚಾರಣೆ ವೇಳೆ, ಬಾಂಗ್ಲಾದೇಶ ಸಂಸದನ ದೇಹದ ಭಾಗಗಳನ್ನು ಎಸೆದಿರುವ ನಿಖರವಾದ ಸ್ಥಳವನ್ನು ಸಿಯಾಮ್ ಹೊಸೈನ್ ಸಿಐಡಿಗೆ ಬಹಿರಂಗಪಡಿಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ತನಿಖಾ ಸಂಸ್ಥೆಯ ತಂಡವು ದಕ್ಷಿಣ 24 ಪರಗಣಗಳ ಭಂಗಾರ್ ಪ್ರದೇಶದ ಉತ್ತರ ಕಾಶಿಪುರದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಅನ್ವರುಲ್ ಅಜೀಂ ಅನಾರ್ ಅವರು ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದು ಮೇ 18ರಂದು ಕಾಣೆಯಾಗಿದ್ದರು, ಅವರ ಮೃತದೇಹ ಮೇ 22ರಂದು ಕೋಲ್ಕತ್ತಾದ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು, ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಈ ಕೇಸ್ನ್ನು ಸಿಐಡಿಗೆ ವಹಿಸಲಾಗಿದೆ.