ನ್ಯೂಸ್

12 ಹೆಬ್ಬಾವುಗಳನ್ನು ಬ್ಯಾಗ್​ನಲ್ಲಿಟ್ಟಿದ್ದ ಬ್ಯಾಂಕಾಕ್‌​ ಪ್ರಯಾಣಿಕ!

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್​ನೊಳಗೆ ಬರೋಬ್ಬರಿ 12 ಹೆಬ್ಬಾವುಗಳನ್ನು ಬಚ್ಚಿಟ್ಟಿದ್ದನ್ನು ಪತ್ತೆಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು, ಆತನನ್ನು ಬಂಧಿಸುವುದರ ಜತೆಗೆ ಹೆಬ್ಬಾವುಗಳನ್ನು ವಶಪಡಿಸಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ವರದಿಯಾಗಿದೆ.

ಏರ್​ಪೋರ್ಟ್​ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ತಡೆದು ಕೆಲ ಕಾಲ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿ ತಂದಿದ್ದ ಹಲವು ಬ್ಯಾಗ್​ಗಳನ್ನು ತೆರೆದ ಅಧಿಕಾರಿಗಳು, 11 ಬಾಲ್ ಹೆಬ್ಬಾವು ಮತ್ತು 1 ಬಿಳಿ ಲಿಪ್ಡ್ ಹೆಬ್ಬಾವನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 12 ಹೆಬ್ಬಾವುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ವ್ಯಕ್ತಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಕಸ್ಟಮ್ಸ್ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ. ಬಾಲ್ ಹೆಬ್ಬಾವುಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಪರಿಗಣಿಸಲಾಗುತ್ತದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).