ನ್ಯೂಸ್

ಬೆಂಗಳೂರಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ಹವಾಮಾನ ಇಲಾಖೆಯ ಎಚ್ಚರಿಕೆ...!

ನಿನ್ನೆ ಕೊಂಚ ಬಿಡುವು ನೀಡಿದ ವರುಣ ಇಂದು ಮತ್ತೆ ಶಾಕ್​ ನೀಡಲು ಮುಂದಾಗಿದ್ದಾನೆ.ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಸಿಲಿಕಾನ್​ ಸಿಟಿ ಜನರಂತೂ ಬಾರೀ ಮಳೆಗೆ ಕಂಗಾಲಾಗಿದ್ದಾರೆ.

ಈ ನಡುವೆ ಹವಮಾನ ಇಲಾಖೆ ಬೆಂಗಳೂರಿನಲ್ಲಿ ಇನ್ನೂ 4 ದಿನಗಳು ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಹಾಸನ, ಕೊಡಗು, ಮೈಸೂರು, ಮಂಡ್ಯ ರಾಮನಗರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಲಾಗಿದೆ.

ಹವಾಮಾನದ ಎಚ್ಚರಿಕೆ..!

ಕರಾವಳಿ ಜಿಲ್ಲೆಗಳಲ್ಲಿ ಹಲವು ಕಡೆ ಹಾಗೂ ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಸರ್ಕಲ್ಯುಲೇಷನ್ ತಮಿಳುನಾಡು ಕರಾವಳಿಯಲ್ಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 22 ರಿಂದ 24 ರವರೆಗೆ ವ್ಯಾಪಕವಾಗಿ ಭಾರೀ ಮಳೆಯಾಗಲಿದೆ.