ಬೆಂಗಳೂರು: ಮಾನವನ ದೇಹದ ಭಾಗಗಳ ಹೋಲುವಂತಹ ಸೆಕ್ಸ್ ಟಾಯ್ಸ್ಗಳ ಆಮದಿಗೆ ಭಾರತದಲ್ಲಿ ನಿಷೇಧವಿದ್ದರೂ ಅಕ್ರಮವಾಗಿ ವಿದೇಶದಿಂದ ಆಮದಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ 3 ವರ್ಷದಿಂದ ಬೆಂಗಳೂರಿಗೆ ಬಂದಿರುವ ಸೆಕ್ಸ್ ಟಾಯ್ಸ್ಗಳನ್ನು ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಗೋಡೌನ್ ತುಂಬುತ್ತಿರುವುದರಿಂದ ಅವುಗಳನ್ನು ನಾಶಮಾಡಲು ಅನುಮತಿಗಾಗಿ ಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದಾರೆ.
ಮಹಿಳೆಯರು ಹಾಗೂ ಪುರುಷರ ದೇಹದ ಭಾಗಗಳ ಹೋಲುವಂತಹ ಸೆಕ್ಸ್ ಟಾಯ್ಸ್ಗಳನ್ನು ವಿದೇಶದ ಇ ಕಾಮರ್ಸ್ ವೆಬ್ಸೈಟ್ಗಳಲ್ಲಿ ಖರೀದಿಸಿ ತರಿಸಿಕೊಂಡಿದ್ದಾರೆ. ಪಾರ್ಸೆಲ್ ರೂಪದಲ್ಲಿ ಸಾಕಷ್ಟು ಸೆಕ್ಸ್ ಟಾಯ್ಗಳು ಆಮದಾಗುತ್ತಿದ್ದು, ಅನುಮಾನದ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುವಾಗ ಅಸಲಿ ವಿಚಾರ ಬಯಲಾಗುತ್ತಿದೆ.
ಸೆಕ್ಷನ್ 11 ಸಬ್ ಸೆಕ್ಷನ್ 2(ಯು) ಕಸ್ಟಮ್ಸ್ ಕಾಯ್ದೆ-1962ರ ಪ್ರಕಾರ ಸೆಕ್ಸ್ ಟಾಯ್ಸ್ಗಳನ್ನು ಆಮದು ಮತ್ತು ರಫ್ತು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಕಾನೂನಿನ ಅರಿವಿಲ್ಲದೇ ವಿದೇಶಿ ಪೋರ್ಟಲ್ಸ್ ಹಾಗೂ ಹಲವು ವಿದೇಶಿ ವೆಬ್ಸೈಟ್ಗಳಲ್ಲಿ ಬೆಂಗಳೂರಿಗರು ಖರೀದಿಸುತ್ತಿದ್ದಾರೆ. ಇದಕ್ಕೆ ಆನ್ಲೈನ್ನಲ್ಲೇ ಹಣ ಪಾವತಿಸಿ ಆಮದು ಮಾಡಿಕೊಳ್ಳುತ್ತಾರೆ. 20 ಡಾಲರ್ನಿಂದ 700 ಡಾಲರ್ ವರೆಗಿನ ಟಾಯ್ಸ್ಗಳನ್ನು ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಪಾರ್ಸೆಲ್ ಪರಿಶೀಲನೆ ವೇಳೆ ಬೆಳಕಿಗೆ: ವಿದೇಶಗಳಿಂದ ವಿಮಾನದ ಮೂಲಕ ಬರುವ ಪಾರ್ಸೆಲ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್ಗೆ ಕಳುಹಿಸುತ್ತಾರೆ. ಇಲ್ಲಿ ಪಾರ್ಸೆಲ್ಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ನೀಡಲಾಗುತ್ತದೆ. ಆದರೆ, ನಿಷೇಧಿತ ವಸ್ತುಗಳಾದ ಡ್ರಗ್ಸ್, ಕೆಲ ಲಿಕ್ಕರ್ಗಳು, ಸೆಕ್ಸ್ ಟಾಯ್ಸ್ನಂತಹ ವಸ್ತುಗಳು ಪಾರ್ಸೆಲ್ಗಳಲ್ಲಿ ಬಂದಿರುವುದು ಪತ್ತೆಯಾದರೆ ಕಸ್ಟಮ್್ಸ ಸಿಬ್ಬಂದಿ ಅವುಗಳನ್ನು ಜಪ್ತಿ ಮಾಡುತ್ತಾರೆ. ಸೆಕ್ಸ್ ಟಾಯ್ಸ್ಗಳ ದೇಶದಲ್ಲಿ ಆಮದು ಮಾಡಿಕೊಳ್ಳಬಾರದು ಎಂಬ ಬಗ್ಗೆ ಬಹುತೇಕ ಜನರಿಗೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ ಕಸ್ಟಮ್್ಸ ಸಿಬ್ಬಂದಿ.
ವಿದೇಶಿ ವೆಬ್ಸೈಟ್ಗಳಲ್ಲೇ ಹೆಚ್ಚಾಗಿ ಖರೀದಿ: ಅಮೆರಿಕಾ, ಲಂಡನ್, ಪೋರ್ಚುಗಲ್, ಫ್ರಾನ್ಸ್ ಸೇರಿ ಯೂರೋಪ್ ಹಾಗೂ ಅಮೆರಿಕಾ ಖಂಡದ ಕೆಲ ದೇಶಗಳ ವೆಬ್ಸೈಟ್ಗಳ ಮೂಲಕವೇ ಹೆಚ್ಚಾಗಿ ಸೆಕ್ಸ್ ಟಾಯ್ಸ್ಗಳನ್ನು ಖರೀದಿಸುತ್ತಾರೆ. ದೇಶದಲ್ಲೂ ಅಕ್ರಮವಾಗಿ ಇಂತಹ ವಸ್ತುಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಜತೆಗೆ ಕೆಲ ನಕಲಿ ವೆಬ್ಸೈಟ್ಗಳು ಹುಟ್ಟಿಕೊಂಡಿವೆ. ಇಂತಹ ವಸ್ತುಗಳನ್ನು ಖರೀದಿಸಲು ಆನ್ಲೈನ್ನಲ್ಲಿ ಹಣ ಹಾಕಿದವರು ವಂಚನೆಗೊಳಗಾದರೂ ಪೊಲೀಸರಿಗೆ ದೂರು ನೀಡುವುದಿಲ್ಲ.
ಕರೊನಾ ನಂತರ ಹೆಚ್ಚಿದ ಬೇಡಿಕೆ: ಕರೊನಾ ಸಮಯದಲ್ಲಿ ಸೆಕ್ಸ್ ಟಾಯ್ಸ್ಗಳ ಆಮದು ಪ್ರಮಾಣ ಹೆಚ್ಚಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ ಕರೊನಾ ನಂತರದ ಸಂದರ್ಭದಲ್ಲಿ ಇದರ ಪ್ರಮಾಣ ಶೇ.60 ರಿಂದ 70 ಹೆಚ್ಚಿದೆ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಪಾರ್ಸೆಲ್ ತೆಗೆದುಕೊಂಡು ಹೋಗುವವರೂ ಇದ್ದಾರೆ. ಸೆಕ್ಸ್ ಟಾಯ್ಸ್ಗಳ ಖರೀದಿಸುವವರಲ್ಲಿ ಪುರುಷರು ಹಾಗೂ ಮಹಿಳೆಯರು ಇಬ್ಬರೂ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.