ಟೊರೊಂಟೊ: ಸ್ವತಂತ್ರ ಬಲೂಚಿಸ್ತಾನ ಹೋರಾಟಗಾರ್ತಿ ಕರೀಮಾ ಬಲೂಚ್ ಕೆನಡಾದ ಟೊರೊಂಟೋದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದು, ಅಸಹಜ ಸಾವಿನ ಪ್ರಕರಣವಾಗಿ ನೋಡದೆ ಹತ್ಯೆ ಎಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ, ಐಎಸ್ಐ, ಸೇನೆಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಕರೀಮಾ 2016ರಲ್ಲಿ ಪ್ರಾಣಾಪಾಯ ಎದುರಾದ ಕಾರಣ ಅಲ್ಲಿಂದ ಪರಾರಿಯಾಗಿ ಕೆನಡಾದಲ್ಲಿ ನಿರಾಶ್ರಿತರಾಗಿ ನೆಲೆಯೂರಿದ್ದರು. ಅವರ ಶವ ಟೊರೊಂಟೋದ ಹಾರ್ಬರ್ಫ್ರಂಟ್ನಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಮೊನ್ನೆ ಪತ್ತೆಯಾgitftu. ಅವರ ಪತಿ ಹಮ್ಮಲ್ ಹೈದರ್ ಮತ್ತು ಸಹೋದರ ಶವವನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಖಿ ಸೋದರಿ! ನಾಲ್ಕು ವರ್ಷಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾ ಬಂಧನದ ಶುಭಾಶಯ ಕೋರುವ ಮೂಲಕ ಕರೀಮಾ ಭಾರತದ ಗಮನಸೆಳೆದಿದ್ದರು. https://youtu.be/VpwepkdWKdQ
ಸ್ವತಂತ್ರ ಬಲೂಚಿಸ್ತಾನದ ಪ್ರಬಲ ಪ್ರತಿಪಾದಕಿಯಾಗಿದ್ದ ಕರೀಮಾ, ಐಎಸ್ಐ ಮತ್ತು ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರು. ಅವರು ಡಿಸೆಂಬರ್ 20ರಂದು ನಾಪತ್ತೆಯಾಗಿದ್ದರು. ಪೊಲೀಸರು ಅವರ ಸಾವನ್ನು ಅಸಹಜ ಸಾವು ಎಂದು ಪರಿಗಣಿಸಿದ್ದು, ನೆಪ ಮಾತ್ರದ ತನಿಖೆ ನಡೆಸುವಂತೆ ತೋರುತ್ತಿದೆ. ಈ ಹತ್ಯೆ ಪಾಕಿಸ್ತಾನದ ಪಿತೂರಿಯಾಗಿದ್ದು, ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆ ನಡೆಸಬೇಕು ಎಂದು ಪಾಕಿಸ್ತಾನದ ಭಿನ್ನಮತೀಯ ಗುಂಪುಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಇದನ್ನೂ ಓದಿ: ‘ಕೈ’ಹಿಡಿದ ಸಿಂಧನೂರು ಜೆಡಿಎಸ್ ತಾಲೂಕು ಅಧ್ಯಕ್ಷ; ಸಿದ್ದರಾಮಯ್ಯ ನೇತೃತ್ವದಲ್ಲಿ ಎಂ.ಲಿಂಗಪ್ಪ ದಢೇಸುಗೂರು ಪಕ್ಷ ಸೇರ್ಪಡೆ
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯ, ಹಿಂಸಾಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸುತ್ತಿದ್ದ ಕರೀಮಾ ಮತ್ತು ಸಂಗಡಿಗರನ್ನು ಮಟ್ಟಹಾಕಲು ಐಎಸ್ಐ, ಪಾಕ್ ಸೇನೆ ಬಹಳಷ್ಟು ಪ್ರಯತ್ನ ಮಾಡಿದ್ದವು. ಕರೀಮಾ ಅವರ ಟ್ವಿಟರ್ ಖಾತೆ ನೋಡಿದರೆ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯಗಳ ಚಿತ್ರಣ ಸಿಗುತ್ತದೆ.
ಇದನ್ನೂ ಓದಿ: ಪಾಕ್ನಲ್ಲಿ ಒಂದು ಮೊಟ್ಟೆಗೆ 30 ರೂ, ಒಂದು ಕೆ.ಜಿ ಚಿಕನ್ಗೆ 300 ರೂ! ಗಗನಕ್ಕೇರಿತು ನಿತ್ಯ ಬಳಕೆ ವಸ್ತುಗಳ ದರ!
ಅವರು ಡಿಸೆಂಬರ್ 11ರಂದು ಬಲೂಚ್ ಹೋರಾಟಗಾರ ಶಬೀರ್ ಬಲೂಚ್ ಪರವಾಗಿ ಧ್ವನಿ ಎತ್ತಿದ್ದರು. ಡಿಸೆಂಬರ್ 14ರಂದು ದ ಗಾರ್ಡಿಯನ್ ವರದಿ 'Kidnap, torture, murder: the plight of Pakistan’s thousands of disappeared'ಯ ಲಿಂಕ್ ಶೇರ್ ಮಾಡಿದ್ದರು. ಇದುವೇ ಅವರ ಕೊನೆಯ ಟ್ವೀಟ್. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..