ನ್ಯೂಸ್

'ಭಗವಂತ ಕೇಸರಿ' ಮೂಲಕ ಈ ದಾಖಲೆ ನಿರ್ಮಿಸಲಿದ್ದಾರಾ ನಟ ಬಾಲಯ್ಯ?

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ, ನಂದಮೂರಿ ಬಾಲಕೃಷ್ಣ ಎಂದೇ ಖ್ಯಾತರಾದ ಬಾಲಯ್ಯ ಅಭಿನಯದ ಬಹುನಿರೀಕ್ಷಿತ 'ಭಗವಂತ ಕೇಸರಿ' ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮತ್ತು ಕುತೂಹಲ ಮೂಡಿದೆ. ಈ ಮಧ್ಯೆ ತಮ್ಮ ಚಿತ್ರದ ಮೂಲಕ ಬಾಲಯ್ಯ ಅವರು ಇದೀಗ ನೂತನ ದಾಖಲೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶನದ 'ಭಗವಂತ ಕೇಸರಿ' ಚಿತ್ರದಲ್ಲಿ ಬಾಲಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಿಲೀಸ್​ ಆಗಲು ಸಜ್ಜಾಗಿರುವ ಈ ಚಿತ್ರದ ಮೂಲಕ ಬಾಲಯ್ಯ ಅವರು ಯಾವ ದಾಖಲೆಯನ್ನು ನಿರ್ಮಿಸಲಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಲಭಿಸಿದೆ.

ಬಾಲಯ್ಯ ನಟನೆಯ 'ಅಖಂಡ' ಮತ್ತು 'ವೀರಸಿಂಹ ರೆಡ್ಡಿ' ಚಿತ್ರಗಳು ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಒಂದು ಮಿಲಿಯನ್ ಡಾಲರ್‌ಗಳ ಗಳಿಕೆಯನ್ನು ಕಂಡಿತ್ತು. ಇದೀಗ 2023ರ ದಸರಾ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಾಣಲು ಸಜ್ಜಾಗಿರುವ ಭಗವಂತ ಕೇಸರಿ ಚಿತ್ರ ಕೂಡ ಈ ಸಾಲಿಗೆ ಸೇರ್ಪಡೆಯಾದರೆ, ಯುಎಸ್​ ಗಲ್ಲಾಪೆಟ್ಟಿಗೆಯಲ್ಲಿ ಹ್ಯಾಟ್ರಿಕ್ ಮಿಲಿಯನ್ ಡಾಲರ್ ಗಳಿಸಿದ ಮೊದಲ ಹಿರಿಯ ನಟ ಎಂಬ ಹೆಗ್ಗಳಿಕೆಗೆ ಬಾಲಯ್ಯ ಪಾತ್ರರಾಗಲಿದ್ದಾರೆ.

ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಶ್ರೀಲೀಲಾ, ಅರ್ಜುನ್​ ರಾಂಪಾಲ್​, ಟಿ.ಎನ್​. ಬಾಲಕೃಷ್ಣ, ಆರ್​. ಸರತ್​ಕುಮಾರ್​ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಎಸ್.ಎಸ್. ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).