ನ್ಯೂಸ್

ಬಾಲರಾಮನ ಪ್ರಾಣ ಪ್ರತಿಷ್ಠೆ; ವಿದೇಶಗಳಲ್ಲೂ ರಾಮಸಂಭ್ರಮ

ವಾಷಿಂಗ್ಟನ್/ಪೋರ್ಟ್ ಆಫ್ ಸ್ಪೇನ್: ಅಯೋಧ್ಯೆ ರಾಮಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆಯ ಸಂಭ್ರಮ ದೇಶದಾಚೆಗೂ ವ್ಯಾಪಿಸಿದ್ದು, ನ್ಯೂಯಾರ್ಕ್​ನ ಟೈಮ್್ಸ ಸ್ಕೆ್ವೕರ್ ಸೇರಿದಂತೆ ಜಗತ್ತಿನ ವಿವಿಧೆಡೆ ನೆಲೆಸಿರುವ ಭಾರತೀಯರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಟೈಮ್್ಸ ಸ್ಕೆ್ವೕರ್​ನಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ಮಾಡುವ ಮೂಲಕ ಅವರು ಈ ಸಂಭ್ರಮದಲ್ಲಿ ಭಾಗಿಯಾದರು. ಸಾಂಪ್ರದಾಯಿಕ ಉಡುಗೆ ಧರಿಸಿ, ಭಜನೆ, ನೃತ್ಯ, ರಾಮಜಪ ಇತ್ಯಾದಿ ಮೂಲಕ ಈ ಧಾರ್ವಿುಕ ಸಂಭ್ರಮಲ್ಲಿ ಪಾಲ್ಗೊಂಡರು.

ಫೇರ್​ಫ್ಯಾಕ್ಸ್ ಕಂಟ್ರಿ ಆಫ್ ವರ್ಜಿನಿಯಾದ ಎಸ್​ವಿ ಲೋಟಸ್ ಟೆಂಪಲ್​ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಿಖ್, ಮುಸ್ಲಿಂ ಮತ್ತು ಪಾಕಿಸ್ತಾನಿ ಅಮೆರಿಕನ್ ಸಮುದಾಯದವರೂ ಸೇರಿ 2,500ಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಷೇರು ಮಾರುಕಟ್ಟೆಯ ಸೂಚ್ಯಂಕವಾದ ನಾಸ್​ಡಾಕ್ ಪರದೆ ಮೇಲೂ ರಾಮಮಂದಿರ ಸಮಾರಂಭದದ ಚಿತ್ರಗಳು ಬಿತ್ತರಗೊಂಡವು.

ಲಾಸ್ ಏಂಜಲೀಸ್​ನಲ್ಲಿ 250 ಕಾರುಗಳ ರ‍್ಯಾಲಿ ನಡೆದಿದ್ದು, ಇದರಲ್ಲಿ ಒಟ್ಟು ಒಂದು ಸಾವಿರ ಮಂದಿ ಭಾಗಿಯಾದರು. ಮೆಕ್ಸಿಕೋದ ಕ್ವಿರೆಟರೊದಲ್ಲಿ ರಾಮನ ಪ್ರಥಮ ದೇವಸ್ಥಾನ ಉದ್ಘಾಟಿಸಲಾಯಿತು.

ಸಾವಿರ ದೇವಸ್ಥಾನಗಳ ದರ್ಶನ: ಕೆನಡಾದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ವರ್ಲ್ಡ್ ಹಿಂದು ಕೌನ್ಸಿಲ್ ಆಫ್ ಅಮೆರಿಕದವರು ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೇರವೇರುತ್ತಿದ್ದಂತೆ ಯುಎಸ್​ಎ ಮತ್ತು ಕೆನಡದಲ್ಲಿನ ಒಟ್ಟು 1 ಸಾವಿರಕ್ಕೂ ಅಧಿಕ ದೇವಸ್ಥಾನಗಳ ದರ್ಶನ ಪಡೆಯುವ ರಾಮ ಮಂದಿರ ಯಾತ್ರೆಯನ್ನು ಘೋಷಿಸಿದರು. ಮೆಸಾಚುಸೆಟ್ಸ್​ನ ಬಿಲ್ಲೆರಿಕದ ಓಂ ಹಿಂದು ಸೆಂಟರ್​ನಿಂದ ಮಾ. 25ರಂದು ಆರಂಭವಾಗುವ ಈ ಯಾತ್ರೆ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮನ ಪ್ರತಿಮೆಗಳಿರುವ ವಿಶೇಷ ವ್ಯಾನ್​ನಲ್ಲಿ ನಡೆಯಲಿದ್ದು, 45 ದಿನಗಳಲ್ಲಿ ಮುಗಿಯಲಿದೆ. ಕೆರಿಬಿಯನ್ ದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಸಂಭ್ರಮಾಚರಣೆ ನಡೆಸಿದರು. ಮಾರಿಷಸ್ ಸರ್ಕಾರ ಹಿಂದು ಸಮುದಾಯದ ಸಾರ್ವಜನಿಕ ಸಿಬ್ಬಂದಿಗೆ 2 ಗಂಟೆಗಳ ಬಿಡುವು ನೀಡಿತ್ತು.