ನ್ಯೂಸ್

ಬಾಳ -ಸುರತ್ಕಲ್ ರಸ್ತೆಯೇ ಕೆರೆ!

Dakshina Kannada

ಸುರತ್ಕಲ್ ಮಳೆಗಾಲದಲ್ಲಿ ಸುರತ್ಕಲ್ -ಬಾಳ ರಸ್ತೆಯ ಒಟ್ಟೆಕಾಯರ್, ಕಾರ್ಗೋಗೇಟ್ ಪರಿಸರ ಕೆರೆಯಂತಾಗುತ್ತಿದೆ. ಹಲವು ಬಸ್, ಲಾರಿ, ಟ್ಯಾಂಕರ್ ಮೊದಲಾದ ವಾಹನಗಳು ಇಲ್ಲಿ ಸಂಚರಿಸುತ್ತವೆ. ಆದರೆ ರಸ್ತೆ ಅವ್ಯವಸ್ಥೆಯಿಂದ ಸಾವಿರಾರು ಜನ ಪರದಾಡುವಂತಾಗಿದೆ.

ಈ ರಸ್ತೆ ಹಿಂದೆ ರಾಜ್ಯ ಹೆದ್ದಾರಿಯಾಗಿದ್ದು ಬಳಿಕ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ. ರಸ್ತೆಯನ್ನು ಸುರತ್ಕಲ್‌ನಿಂದ ಎಂಆರ್‌ಪಿಎಲ್ -ಕಾಟಿಪಳ್ಳವರೆಗೆ ಷಟ್ಪಥಗೊಳಿಸಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದರೂ ಈಡೇರಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ಚರಂಡಿಯೂ ದುಸ್ಥಿತಿಯಲ್ಲಿದೆ. ರಸ್ತೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಪಕ್ಕದ ಕೆಲವು ಪ್ರದೇಶಗಳು ಬಾಳ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆ, ಚರಂಡಿಯ ದುರಸ್ತಿ ಹೊಣೆ ಯಾರದ್ದು ಎಂಬ ಪ್ರಶ್ನೆ ಕಾಡುತ್ತಿದೆ.

ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ. ಚರಂಡಿಯನ್ನು ಮಹಾನಗರ ಪಾಲಿಕೆ ಆಡಳಿತ ದುರಸ್ತಿ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಜನರಿಗೆ ತೊಂದರೆ ಆಗುತ್ತಿರುವ ಕಾರಣ ಗ್ರಾಪಂ ವತಿಯಿಂದ ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ.

ಹುಲಿಗಮ್ಮ ಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ