ನ್ಯೂಸ್

ಮಾದಕ ವಸ್ತು ತೊರೆದು ಸದೃಢ ಸಮಾಜ ನಿಮಿರ್ಸಿ; ರುದ್ರಪ್ಪ ಲಮಾಣಿ

ರಾಣೆಬೆನ್ನೂರ: ಶಿಕ್ಷಣ ಎಂಬುದು ಸಾಮಾಜದ ಸುಭದ್ರತೆಗೆ ಒಂದು ಮುಖ್ಯ ತಳಹದಿ. ಆದರೆ, ಇಂದಿನ ಯುವಪೀಳಿಗೆ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಶಿಕ್ಷಣ ಕಡೆ ಏಕಾಗ್ರತೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಯುವ ಪೀಳಿಗೆ ಮಾದಕ ವಸ್ತಗಳ ತೊರೆದು ಸಮಾಜ ಸದೃಢ ಗೊಳಿಸಲು ಮುಂದಾಗಬೇಕು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಬಿಎಜೆಎಸ್​ಎಸ್​ ಕಲಾ ಮತ್ತು ವಾಣಿಜ್ಯ ಮಾಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾಥಿರ್ ಒಕ್ಕೂಟ, ಎನ್​ಎಸ್​ ಎಸ್​ ಚಟುವಟಿಕೆ ಮತ್ತು ಯುವ ರೆಡ್​ ಕ್ರಾಸ್​ ಘಟಕಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾಥಿರ್ಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆ ಶಿಕ್ಷಣ ಪಡೆದರೆ ಸಾಲದು ಅದರೊಂದಿಗೆ ಸಂಸ್ಕಾರ, ಸಂಸತಿ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ನೀವು ಪಡೆದ ಪದವಿ ಶಿಕ್ಷಣಕ್ಕೆ ಒಂದು ಗೌರವ ಸಿಗುತ್ತದೆ. ಭಾರತ ದೇಶ ಸಂಸ್ಕಾರ ಸಂಸತಿಯಲ್ಲಿ ಅದರದೆಯಾದ ಹೆಸರು ಮಾಡಿದೆ. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಅದರ ಮೌಲ್ಯ ಕ್ಷೀಣಿಸುತ್ತಾ ಬರುತ್ತಿದೆ. ಅದನ್ನು ಉಳಿಸಿ ಬೆಳೆಸ ಬೇಕಾದರೆ ಮೊದಲು ನಿಮ್ಮ ತಂದೆ ತಾಯಿಯನ್ನು ಗೌರವಿಸಿ ಅವರ ಕಷ್ಟ ಕಾರ್ಪಣ್ಯಗಳಲ್ಲಿ ಭಾಗಿಯಾಗಬೇಕು ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್​.ಎಂ. ಕುಬೇರಪ್ಪ ಮಾತನಾಡಿ, ವಿದ್ಯಾಥಿರ್ಗಳು ನಿಮ್ಮ ವ್ಯಕ್ತಿತ್ವ ನಿಮಾರ್ಣವಾಗಬೇಕೆಂದರೆ ನಿಮ್ಮಲ್ಲಿ ಹೊಸ ಜ್ಞಾನವನ್ನು ತುಂಬಿಕೊಂಡರೆ ಮಾತ್ರ ಸಾಧ್ಯ. ಹಾಗೇಯೆ ಸಮಾಜದಲ್ಲಿ ನಿಮ್ಮನ್ನು ಗುರುತಿಸಬೇಕು ಎಂದರೆ ಹೊಸ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಪಡೆದಿದ್ದರೆ ಮಾತ್ರ ಸಾಧ್ಯ ಎಂದರು.

ಪ್ರಾಚಾರ್ಯ ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಎಚ್​.ಎ. ಬಿಕ್ಷಾವತಿರ್ಮಠ, ಕೆ.ಕೆ. ಹಾವಿನಾಳ, ಡಾ. ರವೀಂದ್ರಕುಮಾರ ಬಣಕಾರ, ಎಂ.ಡಿ. ಹೊನ್ನಮ್ಮನವರ, ಶ್ರೀಕಾಂತ ಕುಂಚೂರ, ಕುಮಾರ ಬೆಣ್ಣಿ, ಮಹೇಶ ಕಂಬಳಿ, ಅನಿತಾ ಎಂ., ಎನ್​ಎಸ್​ಎಸ್​ ಅಧಿಕಾರಿ ವಿನಯ ಯಕನಳ್ಳಿ, ಗೀತಾ ಎಸ್​., ರೇಖಾ ಗೋಸಾಲ ಮತ್ತಿತರರು ಉಪಸ್ಥಿತರಿದ್ದರು.