ರಾಣೆಬೆನ್ನೂರ: ನಗರದ ಹಲಗೇರಿ ರಸ್ತೆ ಬಿಎಜೆಎಸ್‌ಎಸ್ ಸಂಸ್ಥೆಯ ಗಾಯತ್ರಿ ಕ್ಯಾಂಪಸ್‌ನಲ್ಲಿ ಸಂಚಾರಿ ರಾಮಾಂಜನೇಯ ಸ್ವಾಮಿಯ ಪೀಠಾಧಿಪತಿ ದತ್ತಾತ್ರೇಯ ವಾಸುದೇವಜಿ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಯಿತು.
ನ. 20ರವರೆಗೆ ಗಾಯತ್ರಿ ದೇವಿಯ ಪಂಚಲೋಹದ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸೇರಿ 15 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪೂಜಾ ಕಾರ್ಯ ನೆರವೇರಿಸಲು ಶಿಕ್ಷಣ ಸಂಸ್ಥೆಗೆ ಆಗಮಿಸಿದ ದತ್ತಾತ್ರೇಯ ವಾಸುದೇವಜಿ ಸ್ವಾಮೀಜಿ ಅವರನ್ನು ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹಾಗೂ ಸಿಬ್ಬಂದಿ ಬರಮಾಡಿಕೊಂಡರು.