ನ್ಯೂಸ್

ಐವನ್‌ ಡಿʼಸೋಜ ಮನೆಗೆ ಬಜರಂಗದಳ ಮುತ್ತಿಗೆ ಯತ್ನ

ಮಂಗಳೂರು: ಕೇಸರಿ ಶಾಲಿನ ಬಗ್ಗೆ ಕಾಂಗ್ರೆಸ್‌ ಮುಖಂಡ ಐವನ್‌ ಡಿʼಸೋಜ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಮಂಗಳೂರಿನ ಅವರ ಮನೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದಾರೆ.
ಇತ್ತೀಚೆಗೆ ಟಿವಿ ಸಂವಾದದ ವೇಳೆ ಕೇಸರಿ ಶಾಲು ಹಾಕಿದವರ ಬಗ್ಗೆ ಭಯೋತ್ಪಾದಕರು ಎಂಬರ್ಥ ಬರುವ ರೀತಿಯಲ್ಲಿ ಮಾತನಾಡಿದ್ದರು ಎಂದು ಆರೋಪಿಸಿ ಐವನ್‌ ಮನೆಗೆ ಕಾರ್ಯಕರ್ತರು ನುಗ್ಗಲು ಮುಂದಾದರು. ಪೊಲೀಸರು ಕಾರ್ಯಕರ್ತರನ್ನು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.