ಬೆಂಗಳೂರು: ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರತಿನಗರ ಠಾಣೆ ಪೊಲೀಸರು ಶಾಸಕ ಬೈರತಿ ಬಸವರಾಜ್ ಬೆಂಬಲಿಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳಿಗೆ ಕಾರು ನೀಡಿದ್ದ ಆರೋಪದ ಮೇಲೆ ಬೈರತಿ ಬಸವರಾಜು ಬೆಂಬಲಿಗ ಅನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಹೆಸರು ಕೂಡ ತಳಕು ಹಾಕಿಕೊಂಡಿದ್ದು, ಐದನೇ ಆರೋಪಿಯಾಗಿದ್ದಾರೆ. ಇತ್ತೀಚೆಗೆ ವಿಚಾರಣೆಗೆ ಕೂಡ ಹಾಜರಾಗಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್, ನವೀನ್ ಎಂಬ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿತ್ತು.
ಅರುಣ್ ಮತ್ತು ನವೀನ್ ಪ್ರಮುಖ ಆರೋಪಿ ಜಗದೀಶ್ ಸಹಚರರಾಗಿದ್ದು, ಬಂಧಿತ ಮತ್ತೊಬ್ಬ ಆರೋಪಿ ಕಿರಣ್ ಕೂಡ ಈ ಇಬ್ಬರು ಆತ್ಮೀಯರಾಗಿದ್ದರು. ಕೊಲೆ ಬಳಿಕ ಇಬ್ಬರು ತಲೆಮರೆಸಿಕೊಂಡಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದ. ಹೀಗಾಗಿ ಸದ್ಯ ಅನಿಲ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಆರೋಪಿ ಜಗದೀಶ ಚಲನಚಿತ್ರರಂಗದ ನಂಟು ಹೊಂದಿದ್ದು, ಹಲವು ನಟಿ-ನಟರ ಜತೆ ಇರುವ ೆಟೋಗಳು ವೈರಲ್ ಆಗಿವೆ.