- ಕಳೆದ ವರ್ಷದ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ.
- ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲ, ಅನುತ್ಪಾದಕ ಆಸ್ತಿ ಸಮಸ್ಯೆ ನೀಗಿಸಲು ಸರ್ಕಾರದ ಯತ್ನ
- ರಾಷ್ಟ್ರೀಯ ಆಸ್ತಿ ಪುನಾರಚನೆ ಕಂಪನಿ (ಎನ್ಎಆರ್ಸಿಎಲ್) ಎಂದು ನಾಮಕರಣ
ಪ್ರಕ್ರಿಯೆ ಹೇಗೆ?
- 15:85ರ ಅನುಪಾತದಲ್ಲಿ ಬ್ಯಾಂಕ್ಗಳಿಂದ ಎನ್ಎಆರ್ಸಿಎಲ್ ಅನುತ್ಪಾದಕ ಆಸ್ತಿಗಳನ್ನು ಖರೀದಿ ಮಾಡಲಿದೆ.
- ಒಟ್ಟು ಮೊತ್ತದ ಶೇ. 15ನ್ನು ಮೊದಲ ಹಂತದಲ್ಲಿ ಪಾವತಿ ಮಾಡಲಿದೆ. ಉಳಿದ ಶೇ. 85ಕ್ಕೆ ಸರ್ಕಾರವೇ ಖಾತ್ರಿ ನೀಡಲಿದೆ
- ಸರ್ಕಾರದ ಖಾತ್ರಿ 5 ವರ್ಷಗಳ ವರೆಗೆ ಊರ್ಜಿತವಾಗಿರುತ್ತದೆ.
ಏನು ಕೆಲಸ?
- ಗುರುತಿಸಲಾಗಿರುವ ಅನುತ್ಪಾದಕ ಆಸ್ತಿ (ಎನ್ಪಿಎ) ಬ್ಯಾಡ್ ಬ್ಯಾಂಕ್ಗೆ ಹಸ್ತಾಂತರ
- ಆಸ್ತಿಗಳನ್ನು ಎನ್ಎಆರ್ಸಿಎಲ್ ನಿರ್ವಹಣೆ ಮಾಡಲಿದೆ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ
- ಹಂತ ಹಂತವಾಗಿ ಆಸ್ತಿ ಪುನಾರಚನೆ, ವಸೂಲಿ ಇನ್ನಿತರ ಪ್ರಕ್ರಿಯೆಗಳು ನಡೆಯಲಿವೆ
- ಮೊದಲ ಹಂತದಲ್ಲಿ 38 ಖಾತೆಗಳನ್ನು ಎನ್ಎಆರ್ಸಿಎಲ್ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದ್ದು, ಇದರ ಮೊತ್ತ 82,845 ಕೋಟಿ ರೂ. ಆಗಿದೆ
- ಮುಂದಿನ ಮಾರ್ಚ್ 31ರೊಳಗೆ ಸುಮಾರು 50 ಸಾವಿರ ಕೋಟಿ ರೂ. ಮೊತ್ತದ 15 ಖಾತೆಗಳನ್ನು ಹಸ್ತಾಂತರ ಮಾಡಲಾಗುತ್ತದೆ.
ಕರೊನಾ ಬಳಿಕ ಎನ್ಪಿಎ ಇಳಿಕೆ: 2020ರಲ್ಲಿ ದೇಶದ ಬ್ಯಾಂಕ್ಗಳಲ್ಲಿ 8.40 ಲಕ್ಷ ಕೋಟಿ ರೂ. ಇದ್ದ ಎನ್ಪಿಎ 2012ರಲ್ಲಿ 7.80 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.