ನ್ಯೂಸ್

ಮಗನ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ಇಲಿಯಾನಾ; ಹೋಗಿದ್ದೆಲ್ಲಿಗೆ?

ಮುಂಬೈ: ನಟಿ ಇಲಿಯಾನಾ ಡಿಕ್ರೂಜ್ ಕೆಲವು ತಿಂಗಳ ಹಿಂದೆ ತಾಯಿಯಾದರು. ಆಕೆಯ ಜೀವನದಲ್ಲಿ ಈ ಸಂತೋಷದ ಕ್ಷಣವು ಆಗಸ್ಟ್ 1 ರಂದು ಘಟಿಸಿತು. ಮಗನ ಹೆಸರು ಕೋವಾ ಫೀನಿಕ್ಸ್ ಡೋಲನ್. ಇಲಿಯಾನಾ ಅಭಿಮಾನಿಗಳಿಗೆ ಮಗನ ಮುಖ ತೋರಿಸಿದ್ದಾರೆ. ಜತೆಗೆ ತನ್ನ ಮಗನಿಗೆ ಸಂಬಂಧಿಸಿದ ಸಣ್ಣ ಮತ್ತು ದೊಡ್ಡ ಅಪ್​​​​ಡೆಟ್ಸ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂದಹಾಗೆ ಇಲಿಯಾನಾ ಮೊದಲ ಬಾರಿಗೆ ತನ್ನ ಮಗನೊಂದಿಗೆ ಊಟಕ್ಕೆ ಹೋಗಿದ್ದರು. ಇದೀಗ ಅದರ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕೋವಾ ಹುಟ್ಟಿದ ನಂತರ, ಇಲಿಯಾನಾ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಆತನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಕೆಲವೊಮ್ಮೆ ಕೋವಾಗೆ ಉಣಬಡಿಸುತ್ತಾ, ಮತ್ತೆ ಕೆಲವೊಮ್ಮೆ ಅವನನ್ನು ಪ್ರೀತಿಯಿಂದ ನೋಡುತ್ತಾ...ಹೀಗೆ ಇಲಿಯಾನಾ ಮಗ ಹುಟ್ಟಿದ ಮೇಲೆ ಚಿಕ್ಕ ಪುಟ್ಟ ಸಂತೋಷಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಕೋವಾ ಜತೆಗೆ ಊಟಕ್ಕೆಂದು ಹೋಗುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದ ಶೀರ್ಷಿಕೆಯಲ್ಲಿ, 'ಬೇಬಿ ಮತ್ತು ಮಾಮಾಸ್ ಫಸ್ಟ್ ಡೇ ಔಟ್ ಲಂಚ್' ಎಂದು ಬರೆದಿದ್ದಾರೆ.

ಈ ಸುಂದರವಾದ ಫೋಟೋದಲ್ಲಿ ಇಲಿಯಾನಾ ಬಿಳಿ ಉಡುಗೆ ಮತ್ತು ನೀಲಿ ಡೆನಿಮ್ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಾನನ್ನು ಇಲಿಯಾನಾ ಪ್ರೀತಿಯಿಂದ ನೋಡುತ್ತಿರುವುದನ್ನೂ ಕಾಣಬಹುದು. ಇದಕ್ಕೂ ಮೊದಲು, ಇಲಿಯಾನಾ ತನ್ನ ಮಗನ ಜೊತೆ ಆಡುವ ಕೆಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಇಲಿಯಾನಾ ತನ್ನ ಮಗನೊಂದಿಗೆ ಇರುವ ಫೋಟೋಗಳಿಗೆ ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಇಲಿಯಾನಾ ಮದುವೆಯಾಗಿದ್ದು ಯಾರನ್ನು?
ಇಲಿಯಾನಾ ತಾನು ಗರ್ಭಿಣಿಯೆಂದು ಘೋಷಿಸಿದಾಗಿನಿಂದ ಮಗುವಿನ ತಂದೆ ಯಾರು ಎಂದು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದರು. ನಟಿ ಈ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ಆದರೆ, ಅವರ ಮಸುಕಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ, ಆದರೆ ಅವರ ಹೆಸರೂ ಅದರಲ್ಲಿ ಇರಲಿಲ್ಲ. ಇಲಿಯಾನಾ ಮೈಕೆಲ್ ಡೋಲನ್ ಅವರನ್ನು ಮದುವೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿ ಅವರು ವಿವಾಹವಾದರು.