ನವಜಾತ ಶಿಶುವನ್ನು ಆಸ್ಪತ್ರೆಯಿಂದ ಕದ್ದು ಪರಾರಿಯಾಗುತ್ತಿರುವ ಮೂರು ಮಂದಿ ಮಹಿಳೆಯರು.  
ನ್ಯೂಸ್

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಶಿಶು ಕಳವು

ಕೋಲಾರ: ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುವನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲೆಯ ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ 7 ತಿಂಗಳ ಗರ್ಭಿಣಿ ನಂದಿನಿ ಆರೋಗ್ಯ ತಪಾಸಣೆಗಾಗಿ ಮಾಲೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಕೋಲಾರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ಹೋಗುವಂತೆ ಶಿಾರಸ್ಸು ಮಾಡಿದ ಮೇರೆಗೆ ಮಾಧ್ಯಹ್ನ 3 ಗಂಟೆಗೆ ಆಗಮಿಸಿ ದಾಖಲಾಗಿದ್ದರು.

ಅಂದಿನ ದಿನ ಸಂಜೆ 6.43 ನಿಮಿಷಕ್ಕೆ ನಂದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಹೃದಯ ಸಂಬಂಧಿ ಕಾಯಿಲೆಯಿದ್ದ ಕಾರಣದಿಂದಾಗಿ ಮಗುವನ್ನು ಐಸಿಯುನಲ್ಲಿ ಇರಿಸಿ ಹಾರೈಕೆ ಮಾಡುತ್ತಿದ್ದರು. 6ನೇ ದಿನ ಮಗುವನ್ನು ಐಸಿಯುನಿಂದ ತಾಯಿ ನಂದಿನಿ ಕೈಗೆ ವೈದ್ಯರು ಮಾದ್ಯಹ್ನ ನೀಡಿದ್ದರು. ಮಗು ಕೈಗೆ ಸಿಕ್ಕಿದೆ ಎಂಬ ಖುಷಿಯಲ್ಲಿದ್ದರು. ನಿದ್ದೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಹೊಂಚು ಹಾಕಿ ಮಗುವನ್ನು ಕದ್ದು ಪರಾರಿಯಾಗಿದ್ದಾರೆ.


ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಹೊಂಚು ಹಾಕಿದ್ದ ಕಳ್ಳರು ನಂದಿನಿ ಮತ್ತು ನಂದಿನಿ ತಾಯಿ ರಾಧಮ್ಮಳ ಚಲನವಲನಗಳ ಬಗ್ಗೆ ಗಮನಿಸುತ್ತಿದ್ದರು. ರಾಧಮ್ಮ ವಾರ್ಡ್‌ನಿಂದ ಹೊರಗೆ ಹೋಗಿದ್ದರು, ಆ ಸಂದರ್ಭದಲ್ಲಿ ನಂದಿನಿ ಮಗುವನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ದರು, ಈ ಮಧ್ಯೆ ಒಂದು ಭಾರಿ ಶೌಚಾಗೆ ಹೋಗಿ ಬಂದು ಮತ್ತೆ ಮಲಗಿದ್ದರು, ಮಲಗಿದ್ದ ಸ್ವಲ್ಪ ಹೊತ್ತಿಗೆ ಅಪರಿಚಿತ ವ್ಯಕ್ತಿಗಳು ಕಾರ್ಟನ್‌ನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಯಾರೊ ಬಿಡು ಎಂದು ಹಾಗೆ ಮಲಗಿದ್ದರು.
ಹೊರಗೆ ಹೋಗಿದ್ದ ರಾಧಮ್ಮೆ ವಾರ್ಡಿಗೆ ಬರುವಷ್ಟರಲ್ಲಿ ಮಗು ಇಲ್ಲದಿರುವುದನ್ನು ಕಂಡು ಗಂಭರಿಗೊಂಡಿದ್ದಾರೆ. ಆಗ ಅಕ್ಕಪಕ್ಕದವರನ್ನು ಕೇಳಿದಾಗ ಯಾರೊ ಬಂದು ಎತ್ತುಕೊಂಡು ಹೋದರು ಎಂದು ಹೇಳಿದ ಕೂಡಲೇ ನಂದಿನಿ ಆತಂಕದಿಂದ ಕಿರುಚಾಡಿ ಗೋಳಾಡಿದ್ದಾಳೆ. ಕೂಡಲೇ ವಾರ್ಡ್‌ಗೆ ಆಗಮಿಸಿದ ವೈದ್ಯಾಧಿಕಾರಿಗಳು ನಂದಿಯನ್ನು ಸಮಾಧಾನಪಡಿಸಿ, ನಂತರ ಸಿಸಿ ಟಿವಿಯನ್ನು ಪರಿಶೀಲಿಸಲಾಗಿದ್ದು, ಎಸ್‌ಪಿ ಅವರಿಗೆ ದೂರು ನೀಡಿ, ನಂದಿನಿಗೆ ಮಗುವನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಶಸ ಚಿಕಿತ್ಸಕ ಡಾ.ಎಸ್.ಎನ್.ವಿಜಯ್ ಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಬಾಲಸುಂದರ್, ನಗರ ಠಾಣೆ ಪೊಲೀಸರು ಸಿಸಿ ಟಿವಿ ಪರಿಶೀಲಿಸಿದರು.