ನ್ಯೂಸ್

26 ಬೆರಳುಗಳಿಂದ ಜನಿಸಿದ ಮಗು! ದೇವರ ಅವತಾರವೆಂದ ಕುಟುಂಬಸ್ಥರು!

ರಾಜಸ್ಥಾನ: ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ಒಟ್ಟು 26 ಬೆರಳುಗಳೊಂದಿಗೆ ಹೆಣ್ಣು ಮಗು ಜನಿಸಿದೆ ಎಂದು ಆರೋಗ್ಯ ಕೇಂದ್ರದ ವೈದ್ಯರು ಸೋಮವಾರ ತಿಳಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು 26 ಬೆರಳುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಚ್ಚು ಬೆರಳುಗಳೊಂದಿಗೆ ಜನಿಸುವುದಕ್ಕೆ ಆನುವಂಶಿಕ ಅಸ್ವಸ್ಥತೆಯೇ ಕಾರಣ ಎಂದು ವೈದ್ಯರು ಹೇಳುತ್ತಾರೆ. ಆದರೆ ತಾವು ಪೂಜಿಸುವ ದೇವರು ತಮ್ಮ ಮನೆಯಲ್ಲಿಯೇ ಹುಟ್ಟಿದ್ದಾರೆ ಎಂದು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ.

ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟುವಾಗ ಮಗುವಿಗೆ ಉದ್ದವಾದ ಕಾಲುಗಳು ಮತ್ತು ಅನೇಕ ಬೆರಳುಗಳಿವೆ. ಕಾಲುಗಳಿಗೆ 6 ಬೆರಳುಗಳಿವೆ, ಕೈಗಳಿಗೆ 7 ಬೆರಳುಗಳಿವೆ, ಒಟ್ಟು 26 ಬೆರಳುಗಳಿವೆ. ಕೆಲವು ಮಕ್ಕಳಿಗೆ 6 ಬೆರಳು ಸಾಮಾನ್ಯವಾಗಿ ಇರುತ್ತದೆ. ಆದರೆ ಹಲವು ಹೆಚ್ಚುವರಿ ಬೆರಳುಗಳೊಂದಿಗೆ ಹುಟ್ಟಿರುವುದು ಅಪರೂಪದ ಘಟನೆ.

ವೈದ್ಯಕೀಯ ಭಾಷೆಯಲ್ಲಿ ಪಾಲಿಡಾಕ್ಟಿಲಿ ಎನ್ನುತ್ತಾರೆ. ಇದು ತುಂಬಾ ಅಪರೂಪ ಎಂದು ವೈದ್ಯರು ಹೇಳುತ್ತಾರೆ. ಹೆಚ್ಚುವರಿ ಬೆರಳುಗಳಿರುವುದರಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೂಡ ಹೇಳಲಾಗುತ್ತದೆ.

ಮಗುವಿನ ಪೋಷಕರು ಕುಟುಂಬದ ಸದಸ್ಯರು ತಾವು ಪೂಜಿಸುವ  ದೇವತೆಯ ಅವತಾರ ಎಂದು ನಂಬುತ್ತಾರೆ. ಅಷ್ಟರ ಮಟ್ಟಿಗೆ ಸಂತಸದಿಂದೆ. "ಅವಳು ನಮ್ಮ ಮನೆಗೆ ದೇವತೆಯಾಗಿ ಬಂದಿದ್ದಾಳೆ. ನಮ್ಮ ಕುಟುಂಬದಲ್ಲಿ 'ಲಕ್ಷ್ಮಿ' ಜನ್ಮ ಪಡೆದಿರುವುದು ನಾವೆಲ್ಲರೂ ಅದೃಷ್ಟವಂತರು" ಎಂದು ಕುಟುಂಬಸ್ಥರು  ಹೇಳಿದರು.