ನ್ಯೂಸ್

ಸ್ಥಳೀಯರೊಂದಿಗೆ Cricket ಆಡಿದ ನಾಗಾಸಾಧುಗಳು; ವೈರಲ್ ವಿಡಿಯೋ ನೋಡಿದ ನೆಟ್ಟಿಗರ ರಿಯಾಕ್ಷನ್ ಮಾತ್ರ...

ಪ್ರಯಾಗ್​ರಾಜ್​: ಹಾಲಿ ನಡೆಯುತ್ತಿರುವ ಮಹಾಕುಂಭ ಮೇಳವು (Mahakumbh Mela) ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಪ್ರತಿನಿತ್ಯ ಇಲ್ಲಿ ಕೋಟ್ಯಂತರ ಭಕ್ತರು ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ಧಾರೆ. ಇನ್ನೂ ಕುಂಭಮೇಳ ಶುರುವಾದಾಗಿನಿಂದಲೂ ಸಾಧು ಸಂತರಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಜನರ ಗಮನ ಸೆಳೆಯುವಲ್ಲಿ ಮಾತ್ರ ವಿಫಲವಾಗಿಲ್ಲ. ಇದೀಗ ನಾಗಾ ಸಾದುಗಳಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಜನವರಿ 13ರಂದು ಆರಂಭವಾದ ಶತಮಾನದ ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿದ್ದು, ಇಲ್ಲಿ ನಡೆಯುತ್ತಿರುವ ಕೆಲವು ಸ್ವಾರಸ್ಯಕರ ಘಟನೆಗಳು ಮಾಧ್ಯಮಗಳಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಅದೇ ರೀತಿ ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವ ಇಬ್ಬರು ನಾಗಾಸಾಧುಗಳು ಕ್ರಿಕೆಟ್ (Cricket) ಆಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಜಿತೇಂದ್ರ ಪ್ರತಾಪ್​ ಸಿಂಗ್ ಎಂಬುವವರು ಪೋಸ್ಟ್ ಮಾಡಿರುವ ವಿಡಿಯೋ ನೋಡುವುದಾದರೆ ಇಬ್ಬರು ನಾಗಾಸಾಧುಗಳು ತಮ್ಮ ಬಿಡುವಿನ ಸಮಯದಲ್ಲಿ ಭಕ್ತರೊಂದಿಗೆ ಕ್ರಿಕೆಟ್ (Cricket) ಆಡಿ ಕಾಲ ಕಳೆದಿದ್ದಾರೆ. ವೈರಲ್​ ಆಗಿರುವ ವೀಡಿಯೋದಲ್ಲಿ ನಾಗಾಸಾಧುಗಳು ಬಹಳ ಸರಾಗವಾಗಿ ಸಿಕ್ಸರ್ ಬಾರಿಸುತ್ತಿರುವುದಕ್ಕೇ ಚೆಂಡನ್ನು ಬೌಂಡರಿಗಟ್ಟುವುದನ್ನು ನೋಡಬಹುದಾಗಿದೆ. ಸಾಧುಗಳ ಬಿಂದಾಸ್ ಆಟ ನೋಡಿದ ಜನರು ಹರ್ಷೋದ್ಗಾರ ವ್ಯಕ್ತಪಡಿಸುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳವು ಫೆಬ್ರವರಿ 26ಕ್ಕೆ ಮುಕ್ತಾಯವಾಗಲಿದ್ದು, ಈಗಾಗಲೇ ಸಮಾರೋಪ ಸಮಾರಂಭದ ವಿಧಿ ವಿಧಾನಗಳು ಆರಂಭಗೊಂಡಿದ್ದು, ಸರ್ಕಾರದ ವತಿಯಿಂದ ಅಗತ್ಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದ್ದು, ಭದ್ರೆತಯನ್ನು ಹೆಚ್ಚಿಸಲಾಗಿದೆ.