ಮಥುರಾ: ಯೋಗ ಗುರು ಬಾಬಾ ರಾಮದೇವ್ ಅವರು ಆನೆಯೊಂದರ ಮೇಲೆ ಯೋಗ ಮಾಡುತ್ತಲೇ ಕೆಳಗೆ ಬಿದ್ದ ಘಟನೆ ಮಥುರಾದ ಮಹಾವನದಲ್ಲಿರುವ ರಾಮನರೇತಿ ಆಶ್ರಮದಲ್ಲಿ ಸಂಭವಿಸಿದೆ.
ಆನೆ ಮೇಲೆ ಕುಳಿತು ಯೋಗ ಭಂಗಿಗಳನ್ನು ರಾಮದೇವ್ ಪ್ರದರ್ಶನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆನೆ ಅಲುಗಾಡಿದ್ದೇ ಅವರು ಬೀಳಲು ಕಾರಣವಾಯಿತು. ಆನೆ ಮೇಲಿಂದ ಬಿದ್ದರೂ ಬಾಬಾ ಯಾವುದೇ ಗಾಯಗಳಿಲ್ಲದೇ ಪಾರಾದರು. 22 ಸೆಕೆಂಡುಗಳ ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.