ನ್ಯೂಸ್

ಕರೆನ್ಸಿ ನೋಟುಗಳಿಂದ ಮುಖ ಒರೆಸಿಕೊಂಡ ಪಾಕ್​​ ಕ್ರಿಕೆಟಿಗರು; ತಿನ್ನೋಕಿಲ್ಲದೆ ಸಾಯ್ತಿದ್ದಾರೆ ನೀವು ಹೀಗೆ ಮಾಡೋದಾ? ಎಂದ್ರು ನೆಟ್ಟಿಗರು

ನವದೆಹಲಿ: ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಮತ್ತೊಬ್ಬ ಕ್ರಿಕೆಟಿಗ ಅಜಂ ಖಾನ್ ಅವರು ಕರೆನ್ಸಿ ನೋಟುಗಳಿಂದ ಮುಖ ಒರೆಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪಾಕಿಸ್ತಾನದ ನೆಟಿಜನ್‌ಗಳು ಅವರನ್ನು ಟೀಕಿಸಿದ್ದಾರೆ. ಮೋಜಿಗಾಗಿ ಮಾಡಿದ್ದ ಪಾಕ್ ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಮತ್ತೊಬ್ಬ ಕ್ರಿಕೆಟಿಗ ಅಜಂ ಖಾನ್ ಅವರು ಕರೆನ್ಸಿ ನೋಟುಗಳಿಂದ ಮುಖ ಒರೆಸಿಕೊಳ್ಳುವ ವಿಡಿಯೋ ಇದೀಗ ಹೊರಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ನೆಟಿಜನ್‌ಗಳು ಬಾಬರ್ ಆಜಮ್ ಮತ್ತು ದೇಶದ ಕ್ರಿಕೆಟ್ ತಂಡದ ಇತರ ಕ್ರಿಕೆಟಿಗರನ್ನು ಟೀಕಿಸಿದ್ದಾರೆ. ಈ ವೀಡಿಯೊವನ್ನು ಮೂಲತಃ ಬಾಬರ್ ಅಜಮ್ ಅವರ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಇಬ್ಬರೂ ಈ ಅನುಚಿತ ಕೃತ್ಯ ಎಸಗಿದ್ದಾರೆ. ವೀಡಿಯೋ ರೆಕಾರ್ಡ್ ಮಾಡುವಾಗ ಬಾಬರ್ ಅಜಂ ಖಾನ್ ಅವರನ್ನು ಕೀಟಲೆ ಮಾಡುತ್ತಾನೆ. ಆಗ ಆಜಮ್ ತನ್ನ ಹಣೆಯನ್ನು ವಿದೇಶಿ ಕರೆನ್ಸಿ ನೋಟುಗಳಿಂದ ಒರೆಸುತ್ತಿರುವುದು ಕಾಣಿಸುತ್ತದೆ.

ಪಾಕಿಸ್ತಾನದಲ್ಲಿ ಆಹಾರದ ಕೊರತೆಯಿಂದ ಅನೇಕ ಜನರು ಸಾಯುತ್ತಿದ್ದಾರೆ.. ಈ ವ್ಯಕ್ತಿ ಬಡವರಿಗೆ ದೇಣಿಗೆ ನೀಡುವ ಬದಲು ಈ ರೀತಿ ಆರಾಮವಾಗಿ ಕುಳಿತು ಅಣಕಿಸುವ ವಿಡಿಯೋಗಳನ್ನು ಮಾಡುತ್ತಿದ್ದಾನೆ ಎಂದು ನೆಟ್ಇಗರು ಆಕ್ರೋಶ ಹೊರ ಹಾಕಿದ್ದಾರೆ.

ಪಾಕಿಸ್ತಾನ ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಮೂರು T20I ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಬಾಬರ್ ನೇತೃತ್ವದ ಪಾಕಿಸ್ತಾನ ಮುಂದಿನ 4 ಪಂದ್ಯಗಳ T20I ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.