ನ್ಯೂಸ್

ಅಯ್ಯಪ್ಪ ಸ್ವಾಮಿ ಪಡಿಪೂಜೆ ಆಯೋಜಿಸಿದ ಪಾಲಿಕೆ ಸದಸ್ಯ ನೂರ್ ಮಹ್ಮದ್…..

ಬಳ್ಳಾರಿ: ಜಿಲ್ಲೆಯ ಪಾಲಿಕೆ ಸದಸ್ಯ ನೂರ್ ಮಹ್ಮದ್ ಅವರು ಅಯ್ಯಪ್ಪ ಮಾಲಾಧಾರಿಗಳಿಗೆ ಮಹಾ ಪಡಿ ಪೂಜೆ ಆಯೋಜನೆ ಮಾಡುವ ಮೂಲಕ ಹಿಂದೂ‌ ಮುಸ್ಲಿಂ ಸಾಮರಸ್ಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಸೌಹಾರ್ದತೆ ಮೆರೆದಿದ್ದಾರೆ.

ದೇಶದಲ್ಲಿ ಒಂದು ಕಡೆ ಕೋಮು ದ್ವೇಷಗಳು ಹಬ್ಬುತ್ತಿರುವ ಸಂದರ್ಭದಲ್ಲಿ 15ನೇ ವಾರ್ಡ್ ಪಾಲಿಕೆ ಸದಸ್ಯ ನೂರ್ ಮಹ್ಮದ್ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ. 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿಯ ಬೃಹತ್ ಮಂಟಪ ನಿರ್ಮಿಸಿ ಪಡಿಪೂಜೆ ನೆರವೇರಿಸಿದ್ದಾರೆ.

ನೂರ್ ಮಹ್ಮದ್ ಆಯೋಜಿಸಿದ್ದ ಪಡಿಪೂಜೆಯಲ್ಲಿ, ಅಯ್ಯಪ್ಪ ಮಾಲಾಧಾರಿಗಳು ಬಹುಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಜತೆಗೆ ಮುಸ್ಲಿಂ ಮುಖಂಡರು ಕೂಡಾ ಪೂಜೆಯಾಲ್ಲಿ ಪಾಲ್ಗೊಂಡರು.