ನ್ಯೂಸ್

ಕೇಂದ್ರ ಆಯುಷ್​ ಸಚಿವರಿಗೆ ಕೊವಿಡ್​-19 ಸೋಂಕು ದೃಢ

ನವದೆಹಲಿ: ಕೇಂದ್ರ ಸಚಿವರು ಒಬ್ಬೊಬ್ಬರಾಗಿ ಕೊವಿಡ್​-19 ಸೋಂಕಿಗೆ ಒಳಗಾಗುತ್ತಿದ್ದಾರೆ.

ಇದೀಗ ಆಯುಷ್ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​ ಅವರಲ್ಲಿಯೂ ಕರೊನಾ ದೃಢಪಟ್ಟಿದೆ. ಕೊವಿಡ್​-19 ಸೋಂಕು ತಗುಲಿದ ಐದನೇ ಕೇಂದ್ರ ಸಚಿವರು ಇವರು.

ಟ್ವೀಟ್​ ಮೂಲಕ ತಿಳಿಸಿದ ಶ್ರೀಪಾದ್​ ನಾಯ್ಕ್​ ಅವರು, ನನಗೆ ಯಾವುದೇ ಲಕ್ಷಣಗಳೂ ಇಲ್ಲ. ಆದರೂ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದೆ. ಫಲಿತಾಂಶ ಪಾಸಿಟಿವ್​ ಬಂದಿದೆ. ಸದ್ಯ ಆಸ್ಪತ್ರಗೆ ದಾಖಲಾಗಲಿಲ್ಲ. ಮನೆಯಲ್ಲಿಯೇ ಐಸೋಲೇಟ್​ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​-19 ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಮೊದಲು ಕೊವಿಡ್​-19 ಸೋಂಕು ತಗುಲಿದ್ದು ಗೃಹ ಸಚಿವ ಅಮಿತ್​ ಷಾಗೆ. ಅವರೀಗ ಚೇತರಿಸಿಕೊಂಡಿದ್ದಾರೆ. ಸದ್ಯ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್​, ಅರ್ಜುನ್​ ಮೇಘ್ವಾಲ್​, ಕೈಲಾಶ್​ ಚೌಧರಿ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

ಶ್ರೀಪಾದ್​ ನಾಯ್ಕ್​ ಅವರು ಏಪ್ರಿಲ್​ ನಲ್ಲಿ ಕರೊನಾ ವಿರುದ್ಧ ಹೋರಾಟದಲ್ಲಿ ಆಯುರ್ವೇದ ಪರಿಣಾಮಕಾರಿ ಎಂದು ಪ್ರತಿಪಾದಿಸಿದ್ದರು. (ಏಜೆನ್ಸೀಸ್​)