ಬಾಳೆಹೊನ್ನೂರು ಸಮೀಪದ ಮಾಗುಂಡಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಕಾಫಿ ಬೆಳೆಗಾರ ಎಂ.ಎನ್.ನಾಗೇಶ್ ಉದ್ಘಾಟಿಸಿದರು. ಡಾ.ಅಶ್ವಿನಿ, ಡಿ.ರಾಜೇಂದ್ರ, ಎಂ.ಜೆ.ಲಕ್ಷತ್ಮಣ್, ಡಾ.ವಿಷ್ಣು ಎನ್.ನಾಥ್ ಮತ್ತಿತರರು ಇದ್ದರು. 
ನ್ಯೂಸ್

ಆಯುರ್ವೇದ ಪದ್ದತಿ ಭಾರತೀಯ ಜೀವನ ಶೈಲಿ

ಬಾಳೆಹೊನ್ನೂರು: ಆಯುರ್ವೇದ ವೈದ್ಯ ಪದ್ಧತಿ ಭಾರತದ ಪಾರಂಪರಿಕ ವೈದ್ಯ ಪದ್ಧತಿಯಾಗಿದ್ದು, ಇದು ನಮ್ಮ ಜೀವನ ಶೈಲಿ. ಇದು ಔಷಧ ಪದ್ಧತಿಯಲ್ಲ ಎಂದು ಕೊಪ್ಪದ ಎ.ಎಲ್.ಎನ್.ರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲಯದ ವೈದ್ಯೆ ಅಶ್ವಿನಿ ಹೇಳಿದರು.
ಮಾಗುಂಡಿಯಲ್ಲಿ ಎ.ಎಲ್.ಎನ್.ರಾವ್ ಆಯುರ್ವೇದ ಮಹಾವಿದ್ಯಾಲಯ, ಬಾಳೆಹೊನ್ನೂರು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ವಿದ್ಯಾಗಣಪತಿ ಸೇವಾ ಸಮಿತಿ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಆಯುರ್ವೇದ ಪದ್ಧತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆಯುರ್ವೇದ ಭಾರತೀಯ ಪದ್ಧತಿಯಾಗಿದ್ದು, ಇದನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಲಭಿಸಲಿದೆ. ಆಯುರ್ವೇದ ಎಂದರೆ ಕೆಲವರು ಔಷಧಿಯ ಪದ್ಧತಿ ಎಂದುಕೊಂಡಿದ್ದಾರೆ. ಆದರೆ ಇದು ಔಷಧಿಯವಲ್ಲ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕ್ರಮವಾಗಿದೆ. ಇದು ನಮ್ಮ ಶೈಲಿ. ಆಯುರ್ವೇದವನ್ನು ಮೊದಲು ನಮ್ಮ ಮನೆ, ಮನಗಳಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಎಲ್ಲ ವೈದ್ಯರನ್ನು ಒಂದೇ ಪ್ರದೇಶಕ್ಕೆ ಕರೆಯಿಸಿ ಗ್ರಾಮೀಣರಿಗೆ ಉತ್ತಮ ಆರೋಗ್ಯ ಸಂಬಂಧಿತ ಸೇವೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ವೈದ್ಯರು ತಪಾಸಣೆ ನಡೆಸಿ ಸೂಕ್ತ ಔಷಧಗಳನ್ನು ಸಹ ನೀಡುತ್ತಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸಬೇಕು ಎಂಬ ಆಶಯದೊಂದಿಗೆ ಗಣಪತಿ ಸಮಿತಿಯೊಂದಿಗೆ ಕೈಜೋಡಿಸಿ ಶಿಬಿರ ನಡೆಸಲಾಗುತ್ತಿದೆ ಎಂದರು.
ಕಾಫಿ ಬೆಳೆಗಾರ ಎಂ.ಎನ್.ನಾಗೇಶ್ ಶಿಬಿರ ಉದ್ಘಾಟಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಾಗುಂಡಿ ಪ್ರಾಥಮಿಕ ಶಾಲಾ ಶಿಕ್ಷಕ ಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು. ಗಣಪತಿ ಸಮಿತಿ ಅಧ್ಯಕ್ಷ ಎಂ.ಜೆ.ಲಕ್ಷ್ಮಣ್, ಆಯುರ್ವೇದಿಕ್ ವಿದ್ಯಾಲಯದ ಡಾ.ವಿಷ್ಣು ಎನ್.ನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ವಹೀದ್ ಅಹ್ಮದ್, ಗ್ರಾಪಂ ಉಪಾಧ್ಯಕ್ಷ ಲತ್ೀ, ಸೀನಿಯರ್ ಚೇಂಬರ್ ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಕಾರ್ಯಕ್ರಮ ನಿರ್ದೇಶಕ ರಮೇಶ್ ನಾಯ್ಕ, ಚೈತನ್ಯ ವೆಂಕಿ. ಓ.ಡಿ.ಸ್ಟೀನ್, ಸತೀಶ್ ಅರಳೀಕೊಪ್ಪ, ಶೇಖರ್ ಇಟ್ಟಿಗೆ ಮತ್ತಿತರರು ಇದ್ದರು.