ಶಿವಮೊಗ್ಗ ಎಪಿಎಂಸಿಯ ಪ್ರವೇಶ ದ್ವಾರ  
ನ್ಯೂಸ್

ಶಿವಮೊಗ್ಗ ಎಪಿಎಂಸಿಯಲ್ಲಿ ಜಾಗೃತಿ ಕಾರ್ಯಾಗಾರ

ಶಿವಮೊಗ್ಗ: ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ, ಜಾಗೃತಿ ಮತ್ತು ಆಡಳಿತ ವಿಭಾಗ ಹಾಗೂ ಅಡಕೆ ವರ್ತಕರ ಸಂಘದಿಂದ ಅ.16ರ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಇ-ವೇ ಬಿಲ್ ಫಾರ್ ಸಿಟಿಜನ್ ಜಾಗೃತಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಕೃಷಿ ಉತ್ಪನ್ನಗಳ ತೆರಿಗೆ ಪಾವತಿದಾರರು ಇದರಲ್ಲಿ ಭಾಗವಹಿಸಬಹುದು. ಅಡಕೆ, ಶುಂಠಿ, ಕಾಳು ಮೆಣಸು ಮುಂತಾದ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ವೇ ಬಿಲ್, ಖರೀದಿ, ಮತ್ತು ಮಾರಾಟದ ಮೇಲಿನ ಟ್ಯಾಕ್ಸ್ ಇನ್‌ವಾಯ್ಸ ವಿವರ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ.
ಮಲೆನಾಡು ವಿಭಾಗದ ಸರಕು ಮತ್ತು ಸೇವಾ ತೆರಿಗೆಗಳ ಜಾರಿ ಮತ್ತು ಜಾಗೃತಿ ವಿಭಾಗದ ಜಂಟಿ ಆಯುಕ್ತ ವಿಜಯ್‌ಕುಮಾರ, ಆಡಳತ ವಿಭಾಗದ ಜಂಟಿ ಆಯಕ್ತೆ ಎಚ್.ಎಸ್.ನಾಜಿಯಾ ಅಮಾನ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಅಡಕೆ ವರ್ತಕರ ಸಂಘದ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು, ತೆರಿಗೆ ಪಾವತಿದಾರರು, ಎಪಿಎಂಸಿ ವರ್ತಕರು, ಸರಕು ಸಾಗಣೆ ವಾಹನ ಮಾಲೀಕರು, ಅಡಕೆ, ಕಾಳು ಮೆಣಸು, ಶುಂಠಿ ಬೆಳೆಗಾರರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.