ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಯಲ್ಲಿ ಬಿಳಿ ಸುಳಿ ಹೋಗದ ಹತೋಟಿಗೆ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸುವ ಜಾತ ನಡೆಯಿತು. ಸವಿತಾ, ರಾಹುಲ್, ಹೇಮಾವತಿ ಇದ್ದರು.  
ನ್ಯೂಸ್

ಬಿಳಿಸುಳಿ ರೋಗ ಹತೋಟಿಗೆ ಅರಿವು

ಶಿವಶಂಕರ್ ಎಂ. ಹೆಬ್ಬಳ್ಳ

ಹೊಳೆನರಸೀಪುರ: ಪ್ರಸಕ್ತ ಋತುಮಾನದ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದು ರೋಗಬಾಧೆ ನಿವಾರಣೆಗೆ ಇಲಾಖೆಯಿಂದ ಅರಿವು ಕಾರ್ಯಕ್ರಮಗಳನ್ನು ಅನುಸರಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಬಿ.ಎಂ.ಸವಿತಾ ತಿಳಿಸಿದರು.

ಹಳೆಕೋಟೆ ಹೋಬಳಿಯಲ್ಲಿ ಬಿಳಿಸುಳಿ ಹೋಗದ ಹತೋಟಿಗೆ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸುವ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮುಸುಕಿನ ಜೋಳಕ್ಕೆ ಹರಡಿರುವ ಬಿಳಿ ಸುಳಿ ರೋಗವು ಮಣ್ಣು ಹಾಗೂ ಗಾಳಿಯಿಂದ ಹರಡಿರುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಹಾಗೂ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತೇವಾಂಶ ಅಧಿಕವಾಗಿ ತಾಪಮಾನ ಕ್ಷೀಣಿಸಿದೆ. ಇದರಿಂದ ರೋಗದ ಶಿಲೀಂದ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿ ರೋಗ ಬಾಧೆ ಉಲ್ಬಣಗೊಂಡಿದೆ. ರೈತರು ರೋಗದ ಗುಣಲಕ್ಷಣ ಹಾಗೂ ಹತೋಟಿಗೆ ತರುವ ಕ್ರಮಗಳ ಬಗ್ಗೆ ತಿಳಿದುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ತಾಲೂಕಿನ ಕಸಬಾ ಹಾಗೂ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯಲ್ಲಿ ಕೂಡ ನಡೆಸಲಾಗುವುದು ಎಂದು ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿಗಳಾದ ರಾಹುಲ್ ಎಂ, ಹೇಮಾವತಿ ಎಂ ಸಿ, ಸಿಬ್ಬಂದಿ ಹಾಗೂ ಹಲವು ರೈತರು ಇದ್ದರು.