ಗುಂಡ್ಲುಪೇಟೆ ಮೈಕ್ರೋ ಫೈನಾನ್ಸ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾರಕಿಹೋಳಿ ಅಭಿಮಾನಿ ಬಳಗಗಳ ಪದಾದಿಕಾರಿಗಳು ಶಿರಸ್ತೇದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ರಾಜೇಂದ್ರ, ರಮೇಶ್ ನಾಯ್ಕ, ಕಾರ್ತಿಕ್, ಕೃಷ್ಣಪ್ಪ, ಗೋವಿಂದನಾಯ್ಕ, ರಾಚನಾಯ್ಕ ಇದ್ದರು. 
ನ್ಯೂಸ್

ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಗುಂಡ್ಲುಪೇಟೆ : ಮೈಕ್ರೋ ಫೈನಾನ್ಸ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾರಕಿಹೋಳಿ ಅಭಿಮಾನಿ ಬಳಗಗಳ ಪದಾಧಿಕಾರಿಗಳು ಶುಕ್ರವಾರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಕ್ಷಣಾ ವೇದಿಕೆಯ ರಾಜೇಂದ್ರ ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳವರು ತಮ್ಮಿಂದ ಸಾಲ ಪಡೆದ ಮಹಿಳಾ ಸಂಘದ ಸದಸ್ಯರ ಮನೆಗೆ ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯಾದರು ಬಂದು ಸಾಲದ ಕಂತು ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಮಹಿಳೆಯರು ಮನೆಯಿಂದ ಹೊರಗೆ ಬರದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹಲವು ಕಡೆ ಜಗಳವಾಡಿ ಮಹಿಳೆಯರ ಮೇಲೆ ಹಲ್ಲೆ ಮಾಡಿ ಜತೆಗೆ ರೌಡಿಗಳನ್ನು ಕರೆದುಕೊಂಡು ಹೋಗಿ ಹೆದರಿಸುವುದು ಮಾಡುತ್ತಿದ್ದು, ಇದರಿಂದ ಸಾಲ ಪಡೆದವರು ಕಿರುಕುಳ ಅನುಭವಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮಕೈಗೊಂಡು ಅವರು ವ್ಯವಹರಿಸಲು ನೀಡಿರುವ ಲೈಸನ್ಸ್‌ಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರಿಗೆ ಸಲ್ಲಿಸಿದರು.

ಇದೇ ವೇಳೆ ರಮೇಶ್ ನಾಯಕ, ಕಾರ್ತಿಕ್, ಕೃಷ್ಣಪ್ಪ, ಗೋವಿಂದನಾಯಕ, ರಾಚನಾಯಕ ಸೇರಿದಂತೆ ಹಲವರು ಇದ್ದರು.