????????????????????????????????????????????????????????????????????????????????????????????????????????????????????????????????????????????????????????????????????????????????????????? 
ನ್ಯೂಸ್

ಬೆಂಕಿ ನಂದಿಸಲು ಮುಂದಾಗಿ

ಎ. ಆರ್. ರಘುರಾಮ

ಹುಣಸೂರು : ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ನಗರದ ಜ್ಞಾನಧಾರಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರದಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸುವ ಕುರಿತು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.
ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಣಸೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ.ಸಿ.ಸತೀಶ್ ಮತ್ತವರ ತಂಡ ಸಣ್ಣ ಅಗ್ನಿ ನಂದಕಗಳ ಮೂಲಕ ಅಗ್ನಿ ಅವಘಡಗಳನ್ನು ನಿಯಂತ್ರಿಸುವ ಮತ್ತು ಅವಘಡಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಕುರಿತು ಮಾಹಿತಿ ನೀಡಿದರು.
ವಿದ್ಯುತ್‌ನಿಂದ ಬೆಂಕಿ ತಗಲುವುದು, ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳುವುದು, ಸಿನಿಮಾ ಮಂದಿರಗಳಲ್ಲಿ, ರೈತರ ಜಮೀನಿನಲ್ಲಿರುವ ಬಣವೆಗಳಿಗೆ ಬೆಂಕಿ ಕಾಣಿಸಿಕೊಂಡರೆ ಯಾವ ರೀತಿ ಬೆಂಕಿ ನಂದಿಸಬೇಕು ಎನ್ನುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ಅನಾಹುತಗಳು ಸಂಭವಿಸಿದ ವೇಳೆ ತಕ್ಷಣ ಟೋಲ್‌ಫ್ರೀ ನಂಬರ್ 112ಗೆ ಕರೆ ಮಾಡಲು ಕೋರಿದ ಅವರು, ರೈತರು ತಮ್ಮ ಬಣವೆಗಳನ್ನು ಕನಿಷ್ಠ 30 ಅಡಿ ಅಂತರದಲ್ಲಿ ಜೋಡಿಸುವುದು ಅಗತ್ಯವೆಂದು ಸಲಹೆ ನೀಡಿದರು.