ನ್ಯೂಸ್

ಅಭಿಷೇಕ್​ ಮನೆಗೆ ಮರಿ ಅಂಬರೀಶ್ ಎಂಟ್ರಿ!ಮಂಡ್ಯದ ಗಂಡು ಬಂದ್ರು..ಎಂದ ಫ್ಯಾನ್ಸ್...Aviva Abhishek Give Birth To Baby Boy

ಬೆಂಗಳೂರು: ( Aviva Abhishek Give Birth To Baby Boy )  ಸ್ಯಾಂಡಲ್​ವುಡ್​​ ನಟ ಅಂಬರೀಶ್ ಅವರ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಅವಿವಾ ದಂಪತಿ  ಗಂಡು ಮಗುವಿನ ಪೋಷಕರಾಗಿದ್ದಾರೆ.  ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ...ಜೂನಿಯರ್ ರೆಬೆಲ್ ಸ್ಟಾರ್ ಎಂಟ್ರಿಯಿಂದ ಕರ್ನಾಟಕವೇ ಖುಷಿ ಪಟ್ಟಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದು, ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಭಾವುಕರಾಗಿದ್ದಾರೆ. ತಾಯಿ ಅವೀವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಜೂನ್ 5, 2023ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ಅಭಿಷೇಕ್ ಅಂಬರೀಷ್ ಅವರನ್ನು ವಿವಾಹವಾಗಿರುವ ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರಿ ಅವಿವಾ ಸ್ಟಾರ್ ನಟನನ್ನು ಮದುವೆಯಾದರು. ಆಗಸ್ಟ್‌ ತಿಂಗಳಿನಲ್ಲಿ ಅಂಬರೀಶ್‌ ನಿವಾಸದಿಂದ ಸಿಹಿ ಸುದ್ದಿ ಹೊರ ಬಂದಿದೆ.

ಅವಿವಾ ಮೊಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಹೊರ ಬಂದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಸೆಪ್ಟೆಂಬರ್‌ 18, 2024ರಂದು ಅವೀವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ.