ನ್ಯೂಸ್

ಚಿತ್ರ ಗೆಲ್ಲುತ್ತೆ ಅಂತ ಗೊತ್ತಿದ್ರೂ ಅವತಾರ್​-2 ನಿರ್ಮಾಪಕಗೆ ಪುಕ ಪುಕ..!

ನವದೆಹಲಿ: ಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್, 2009ರ 'ಅವತಾರ್‌' ಚಿತ್ರದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯ ದಾಖಲೆ ಬರೆದಿದ್ದರು. ಇದೀಗ ಅವತಾರ್​-2 ಬಿಡುಗಡೆ ಆಗುತ್ತಿರುವುದು ಗೊತ್ತೇ ಇದೆ. ಈ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಹಾಕಿದ್ದ ಬಂಡವಾಳ ತಂದು ಕೊಡುವುದರಲ್ಲಿ ಯಾವುದೇ ಸಂಶಯಗಳು ಉಳಿದಿಲ್ಲ ಎನ್ನುವುದು ಟ್ರೇಲರ್​ ನೋಡಿದ ಎಲ್ಲರಿಗೂ ಸ್ಪಷ್ಟವಾಗಿದೆ.

ಇವರು ಅವತಾರ್​-2 ಮೂಲಕ ಪ್ರೇಕ್ಷಕರನ್ನು ಹೊಸ ಜಗತ್ತು ಪಂಡೋರಕ್ಕೆ ಕರೆದೊಯ್ಯುತ್ತಿದ್ದಾರೆ. ಅವತಾರ್: ದ ವೇ ಆಫ್ ವಾಟರ್‌ಗಾಗಿ ಇದುವರೆಗೆ 350 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ವೆಚ್ಚವಾಗಿದೆ. ಈ ಚಿತ್ರ 13 ವರ್ಷಗಳ ನಂತರ ಬರುತ್ತಿರುವುದರಿಂದ ಎಲ್ಲರಲ್ಲೂ ಕುತೂಹಲ; ಹುಟ್ಟಿಸಿದೆ. ಆದರೂ ಜೇಮ್ಸ್​ ಕ್ಯಾಮರೂನ್​ಗೆ ಪುಕ-ಪುಕವಂತೆ!

ಸಂದರ್ಶನ ಒಂದರಲ್ಲಿ ಮಾತನಾಡಿದ ಕ್ಯಾಮರೂನ್​ 'ಇಂದು (ಡಿ.8) ಅವತಾರ್​-2ನ ಪ್ರೀಮಿಯಂ ಶೋಗಳು ಶುರುವಾಗಿವೆ. ಎಲ್ಲಾ ಸಿನಿ ವಿಮರ್ಶಕರೂ ಮೆಚ್ಚುಗೆಯನ್ನೇ ವ್ಯಕ್ತಪಡಿಸುತ್ತಿದ್ದರೆ. ಆದರೆ ನನಗೆ ಚಿಂತೆ ಏನೆಂದರೆ ಈಗ ಓಟಿಟಿ ಪ್ರೇಮಿಗಳು ಹೆಚ್ಚಾಗಿದ್ದಾರೆ. ಇದರ ಜೊತೆಗೆ ಕರೊನದ ಡಬಲ್ ಹೊಡೆತದಿಂದಾಗಿ ಥಿಯೇಟರ್​ಗೆ ಹೋಗಿ ಸಿನಿಮಾ ವೀಕ್ಷಿಸುವ ಜನ ಕಡಿಮೆಯಾಗಿದ್ದಾರೆ. ಈಗ ಬದಲಾಗಿರುವ ಮಾರುಕಟ್ಟೆಯಲ್ಲಿ ನಾವು ಲಾಭ ಗಳಿಸಬಹುದೇ? ಈ ಚಿಂತೆ ನನಗೆ ಕಾಡುತ್ತಿದೆ' ಎಂದು ತಮ್ಮ ಭಯವನ್ನು ಜಗತ್ತಿನೆದುರು ಬಿಚ್ಚಿಟ್ಟರು. (ಏಜೆನ್ಸೀಸ್​)