ನ್ಯೂಸ್

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಆಟೋ ಚಾಲಕರು; ಇ- ಬೈಕ್ ಟ್ಯಾಕ್ಸಿ ನಿಲ್ಲಿಸಲು ಆಗ್ರಹ…

Webdesk - Athul Damale

ಬೆಂಗಳೂರು: ಆಟೋ ಚಾಲಕರ ಪ್ರತಿಭಟನೆ ಶುರುಮಾಡಿದ್ದು ರಾಜ್ಯಸರ್ಕಾರಕ್ಕೆ ಆಟೋ ಚಾಲಕರ ಸಂಘ ಇ- ಬೈಕ್ ಟ್ಯಾಕ್ಸಿ ಈ ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಎರಡು ಸಾವಿರ ಆಟೋ ಡ್ರೈವರ್​ಗಳು ಪೋಸ್ಟಲ್ ಮೂಲಕ ಪ್ರಧಾನಮಂತ್ರಿಗೆ ಮನವಿ ಕಳುಹಿಸಲಿದ್ದು ಈ ಕೂಡಲೇ ಇ- ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಟೋ ಚಾಲಕರು ತಮ್ಮ ಮನವಿಯನ್ನು ಪರಿಗಣಿಸಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇ-ಟ್ಯಾಕ್ಸಿ ಬೈಕ್​, ವೈಟ್​ ಬೋರ್ಡ್​ ಟ್ಯಾಕ್ಸಿಗಳನ್ನು ನಿಲ್ಲಿಸದಿದ್ದರೆ ಬೆಂಗಳೂರಲ್ಲಿ ಒಂದು ಆಟೋ ಕೂಡ ರಸ್ತೆಗಿಳಿಯಲ್ಲ, ಉಪವಾಸ ಸತ್ಯಗ್ರಹಕ್ಕೆ ಕೂರುತ್ತೇವೆ ಎಂದು ಸರ್ಕಾರಕ್ಕೆ ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಆಟೋ ಚಾಲಕರ ಮಾಲೀಕರ ಸಂಘದ ಸಂಚಾಲಕ ಮಂಜುನಾಥ್ ಹೇಳಿಕೆ ನೀಡಿದ್ದು 'ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲಿಸುತ್ತೇವೆ. ರ‌್ಯಾಪಿಡೋ ಆಟೋದಿಂದ ನಮ್ಮ ಆಟೋ ಕಾರ್ಮಿಕರ ಆದಾಯ ಕುಸಿದಿದೆ. ಸರ್ಕಾರ ಇದನ್ನು‌ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರು ರ‌್ಯಾಲಿಗೆ ಅವಕಾಶ ಇಲ್ಲಾ ಅಂತಿದ್ದಾರೆ. ಇವರನ್ನು ಕೇಳ್ಕೊಂಡು ನಾವು ಹೋರಾಟ ಮಾಡೋಕ್ಕಾಗಲ್ಲ. ವಿಧಾನಸೌಧ ಚಲೋ ಮಾಡಿಯೇ ಮಾಡುತ್ತೇವೆ' ಎನ್ನುತ್ತಿದ್ದಾರೆ.