ಶನಿವಾರಸಂತೆ: ಸಮೀಪದ ಆಲೂರು-ಸಿದ್ದಾಪುರ ಗೂಡ್ಸ್ ಆಟೋ ಚಾಲಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಆಟೋ ಚಾಲಕರು ಆಲೂರು-ಸಿದ್ದಾಪುರ ಆಟೋ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆ ಬದಿಯಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವ ಜತೆಯಲ್ಲಿ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಬಿ.ಅವಿನಾಶ್, ಉಪಾಧ್ಯಕ್ಷ ಉನ್ನಿಕೃಷ್ಣ, ಸದಸ್ಯರಾದ ಭೋಜೇಗೌಡ, ಮನು, ಸಂತೋಷ್, ಎ.ಆರ್.ಹರೀಶ್, ಶೇಖರ್ ಮುಂತಾದವರು ಪಾಲ್ಗೊಂಡಿದ್ದರು.