ನ್ಯೂಸ್

ಮಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರ ಬಲಿ

ಮಂಗಳೂರು: ಮಂಗಳೂರಿನ ಮರೋಳಿ ಬಳಿ ಬುಧವಾರ ಬೆಳಗ್ಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ರಿಕ್ಷಾ ಚಾಲಕ ಹಾಗೂ ಪಾದಚಾರಿ ಮೃತಪಟ್ಟಿದ್ದಾರೆ.

ಹಿಂದಿನ ಮಂಗಳೂರು ಗ್ರಾಮಾಂತರ ಪೊಲೀಸ್ ಸ್ಟೇಷನ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್ ಲಾರಿಗೆ ಪಡೀಲ್ ಕಡೆಯಿಂದ ಬಂದ ರಿಕ್ಷಾ ಹತೋಟಿ ತಪ್ಪಿ ಹಿಂದಿನಿಂದ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ರಿಕ್ಷಾ ಚಾಲಕ ವಳಚ್ಚಿಲ್‌ನಿವಾದಿ ಸಲೀಂ ಎಂಬುವರನ್ನು ವೆನ್ ಲಾಕ್‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಅಟೊ ರಿಕ್ಷಾ ಡಿಕ್ಕಿಯಾಗಿ ಪಾದಚಾರಿ ನಸೀರ್ ಎಂಬವರು ಮೃತಪಟ್ಟರು.

ಈ ಕುರಿತು ಮಂಗಳೂರು ಪೂರ್ವ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.