ನ್ಯೂಸ್

ಆಟೋ ಚಾಲಕ ಸಿ. ಕೆ. ಸೋಮಶೇಖರ್  ನಿಧನ

ಎ. ಆರ್. ರಘುರಾಮ

ಸಾಲಿಗ್ರಾಮ: ತಾಲೂಕಿನ ಚಿಕ್ಕಭೇರ್ಯ ಗ್ರಾಮದ ಆಟೋ ಚಾಲಕ ಸಿ. ಕೆ. ಸೋಮಶೇಖರ್ (43) ಶನಿವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ತಂದೆ ಕೃಷ್ಣನಾಯಕ, ತಾಯಿ ಶಾಂತಮ್ಮ, ಪತ್ನಿ ಸುನೀತಾ ಮತ್ತು ಪುತ್ರ ದೀಕ್ಷಿತ್ ಇದ್ದಾರೆ. ಭಾನುವಾರ ಸ್ವಗ್ರಾಮ ಚಿಕ್ಕಭೇರ್ಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.