ನ್ಯೂಸ್

ಬೆಡ್‌ರೂಂನಲ್ಲಿ ಮಲಗಿ ಬುಸುಗುಟ್ಟಿದ 6 ಅಡಿ ಉದ್ದ ವಿಷಕಾರಿ ಹಾವು!

ಆಸ್ಟ್ರೇಲಿಯಾ: ಹಾವು ಅಂದ್ರೆ ಯಾರಿಗೆ ತಾನೆ ಭಯ ಆಗೋದಿಲ್ಲ ಹೇಳಿ,  ಬೆಡ್‌ರೂಂ​​ನಲ್ಲಿ ಹಾಸಿಗೆಯಲ್ಲಿ ಮಲಗಿದ್ದ ವಿಷಕಾರಿ ಹಾವು ಕಂಡೊಡನೆ ಮಹಿಳೆ ಎದ್ನೋ ಬಿದ್ನೋ ಅಂತಾ ಓಡಿಬಂದಿದ್ದಾಳೆ.

ಆಸ್ಟ್ರೇಲಿಯಾ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಮನೆಯೊಂದದಲ್ಲಿ ವಿಷಕಾರಿ ಹಾವು ನುಗ್ಗಿದ್ದು, ಮಹಿಳೆಯ ಬೆಡ್‌ರೂಂ ಹಾಸಿಗೆಯಲ್ಲೇ ಮಲಗಿರುವುದು ಕಂಡು ಬಂದಿತ್ತು. ಇದನ್ನು ಕಂಡ ದಿಕ್ಕಾಪಾಲಾಗಿದೆ ಓಡಿ ಹೋಗಿದ್ದಾಳೆ. ಅಷ್ಟೇ ಅಲ್ಲದೇ ಹಾವು ಹೊರಕ್ಕೆ ಹೋಗದಂತೆ ತಡೆದಿದ್ದಾಳೆ. ಬಾಗಿಲು ಸಂದಿಯನ್ನು ಟವೆಲ್‌ನಿಂದ ಮುಚ್ಚಿದ್ದಾಳೆ.

ಉರಗ ರಕ್ಷಕರೊಬ್ಬರಿಗೆ ಕರೆ ಮಾಡಿ ಹಾವನ್ನು ರಕ್ಷಣೆ ಮಾಡಿದ ಘಟನೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವುಗಳು ಹುತ್ತದಿಂದ ಹೊರಬರುತ್ತವೆ. ವಾಸಕ್ಕೆ ತಂಪಾದ ಜಾಗಗಳನ್ನೇ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮನೆಗಳಿಗೂ ಹೊಕ್ಕಿಬಿಡುತ್ತವೆ.